X
ಹೋಮ್ » ಸೆಲಬ್ರಿಟಿಗಳು » ಜಯಣ್ಣ » ಜೀವನ ಚರಿತ್ರೆ
ಜಯಣ್ಣ
Producer

ಜಯಣ್ಣ ಜೀವನ ಚರಿತ್ರೆ

ಜಯಣ್ಣ

ಜಯಣ್ಣ ಆರ್.ವಿ.ಇಂಜಿನಿಯರಿಂಗ್ ಕಾಲೇಜು ವಿಧ್ಯಾರ್ಥಿ. ಇವರ ಬಾಲ್ಯದ ಹೆಸರು `ಧನಂಜಯ'. 1994 ರಲ್ಲಿ ತೀರಿಕೊಂಡಾಗ ಇವರು ತಮ್ಮ ಚಿಕ್ಕಪ್ಪ ಕೇಶವ ಮೂರ್ತಿ ಆಶ್ರಯಕ್ಕೆ ಬರುತ್ತಾರೆ. ಕೇಶವ ಮೂರ್ತಿಯವರು ಬೆಂಗಳೂರಿನ `ಅಭಿಮಾನ್ ಥೀಯೆಟರ್ ನಲ್ಲಿ ವ್ಯವಸ್ಥಾಪಕರಾಗಿರುತ್ತಾರೆ. ಇವರ ಕೈಯಲ್ಲಿ ಬಾಲ್ಕನಿ ಟಿಕೆಟ್ ಬುಕಿಂಗ್ ಕ್ಲರ್ಕ ಆಗಿ ಸೇರಿಕೊಳ್ಳುತ್ತಾರೆ.ಹಣಕಾಸಿನ ಕೊರತೆಯಿಂದ ತಮ್ಮ ಇಂಜಿನಿಯರಿಂಗ್ ಓದನ್ನು ಮೂರನೇ ವರ್ಷಕ್ಕೆ ನಿಲ್ಲಿಸುತ್ತಾರೆ. ಅಭಿಮಾನ ಥಿಯೆಟರ್ ಮಾರಾಟವಾದ ನಂತರ ಗಾಂಧಿನಗರದ ಒಂದು 10*10 ft ನ ಆಫೀಸ್ ನಲ್ಲಿ ಚಿತ್ರ ವಿತರಣಾ ಸಂಸ್ಥೆಯನ್ನು ತೆರೆಯುತ್ತಾರೆ. ಎರಡನೇ ಸಲ ಬಿಡುಗಡೆಯಾಗುವ ಹಿಂದಿ ಚಿತ್ರಗಳ ವಿತರಣೆಯಲ್ಲಿ ತೊಡುಗುತ್ತಾರೆ.50 ಕ್ಕೂ ಹೆಚ್ಚು ಹಿಂದಿ ಚಿತ್ರಗಳನ್ನು ವಿತರಿಸಿದ್ದಾರೆ.

ಜಯಣ್ಣ-ಭೋಗೇಂದ್ರ

ಭೋಗೇಂದ್ ಅವರ ಜೊತೆಗೂಡಿ ಕನ್ನಡ ಚಿತ್ರಗಳನ್ನು ವಿತರಿಸಲು ತೊಡುಗುತ್ತಾರೆ.ಇವರು ಮೊದಲು ವಿತರಿಸಿದ ಚಿತ್ರ ಥ್ರಿಲ್ಲರ್ ಮಂಜು ಅಭಿನಯದ `ಪೋಲಿಸ್ ಡಾಗ್' ಚಿತ್ರ. ನಂತರ ಇವರು ವಿತರಿಸಿದ ಸಾಲು ಸಾಲು ಚಿತ್ರಗಳು ಹಾಕಿದ ಬಂಡವಾಳ ಕೂಡ ಗಿಟ್ಟಿಸದೇ ಬಾಕ್ಸ ಆಫೀಸ್‌ನಲ್ಲಿ ಸೋತವು. ನಂತರ 2003 ರಲ್ಲಿ ಹೊಸ ಆಫೀಸ್ ತೆರೆದ ಇವರ ಮೊದಲ ಯಶಸ್ವಿ ಚಿತ್ರಗಳು `ಚಂದ್ರ ಚಕೋರಿ' ಮತ್ತು ದಾಸ. ನಂತರ ದರ್ಶನ ಅಭಿನಯದ `ಭೂಪತಿ',`ಅಯ್ಯ',`ಶಾಸ್ತ್ರಿ',`ಸುಂಟರಗಾಳಿ' ಮುಂತಾದ 20 ಸಾಲು ಸಾಲು ಚಿತ್ರಗಳನ್ನು ವಿತರಿಸಿ ಲಾಭ ಕಂಡರು. ಇವರು ವಿತರಿಸಿದ `ಜೊತೆ ಜೊತೆಯಲಿ',`ಮುಂಗಾರು ಮಳೆ',`ದುನಿಯಾ',`ಪಲ್ಲಕ್ಕಿ'`ಗಜ' ಮುಂತಾದ ಚಿತ್ರಗಳು ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದವು. ಈ ಜೋಡಿ ಓಂದನೂರಾ ಐವತ್ತಕ್ಕೂ ಹೆಚ್ಚು ಚಿತ್ರಗಳನ್ನು ವಿತರಿಸಿದೆ,ಅದರಲ್ಲಿ ಮುಕ್ಕಾಲು ಪ್ರತಿಶತ ಚಿತ್ರಗಳು ಯಶಸ್ವಿಯಾಗಿವೆ.

ಚಿತ್ರನಿರ್ಮಾಣ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ಸಲಹೆಯಂತೆ ಚಿತ್ರನಿರ್ಮಾಣಕ್ಕಿಳಿದ ಇವರು ಮೊದಲು ನಿರ್ಮಿಸಿದ ಚಿತ್ರ ದರ್ಶನ್ ಅಭಿನಯದ `ಅರ್ಜುನ್'. ನಂತರ `ಪರಮಾತ್ಮ',`ಜಾನು',`ಡ್ರಾಮಾ'`ಗೂಗ್ಲಿ',`ಗಜಕೇಸರಿ',`Mr & Mrs ರಾಮಚಾರಿ',`ರಣವಿಕ್ರಮ',`ಬುಲೆಟ್ ಬಸ್ಯಾ' ,`ಮಫ್ತಿ' ಮುಂತಾದ ಸೂಪರ್ ಹಿಟ ಚಿತ್ರಗಳನ್ನು ನಿರ್ಮಿಸಿದ್ದಾರೆ.

 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+