twitter
    Celebs»Johnny Lever»Biography

    ಜಾನಿ ಲಿವರ್ ಜೀವನಚರಿತ್ರೆ

    ಜಾನಿ ಲಿವರ್ ಬಾಲಿವುಡ್ ಚಿತ್ರರಂಗದಲ್ಲಿ ಪ್ರಸಿದ್ಢವಾಗಿರುವ ಪ್ರಖ್ಯಾತ ಹಾಸ್ಯನಟ. ಸ್ಟಾಂಡ್ ಅಪ್ ಕಾಮಿಡಿಯ ಸಂಸ್ಕೃತಿಗೆ ನೀರೆರೆದವರಲ್ಲಿ ಇವರು ಒಬ್ಬರು. ಆಂಧ್ರ ಪ್ರದೇಶದ ನಂದ್ಯಾಳದಲ್ಲಿ ಜನಿಸಿದ ಇವರು ಬದುಕು ಕಟ್ಟಿ ಕೊಂಡಿದ್ದು ಪಕ್ಕದ ಮಹಾರಾಷ್ಟದಲ್ಲಿ.


    ನಂತರ ಇವರ ಕುಟುಂಬ ಮುಂಬೈಗೆ ಬಂದು ನೆಲೆಸಿತು. ಮನೆಯಲ್ಲಿ ಹಣಕಾಸಿನ ತೊಂದರೆಯಿಂದ ಏಳನೇ ಕ್ಲಾಸಿಗೆ ಶಾಲೆ ತೊರೆದು ಬೀದಿ ಬೀದಿಯಲ್ಲಿ ಪೆನ್ನು ಮಾರುತ್ತಾ ಬಾಲಿವುಡ್ ನಟರ ಮಿಮಿಕ್ರಿ ಮಾಡುತ್ತಿದ್ದರು. ಒಂದು ದಿನ ಹಿಂದುಸ್ತಾನ್ ಲಿವರ್ ಲಿಮಿಟೆಡ್ ಕಂಪನಿಯ ಸಮಾರಂಭದಲ್ಲಿ ತನ್ನ ಸೀನಿಯರ್ ಅಧಿಕಾರಿಗಳ ಮಿಮಿಕ್ರಿಯನ್ನು ಅದ್ಭುತವಾಗಿ ಮಾಡಿದರು. ಅಲ್ಲಿಂದ ಜನರು ಇವರನ್ನು ಜಾನಿ ಲಿವರ್ ಎಂದೇ ಕರೆಯತೊಡಗಿದರು.

     

    ನಂತರ ಹಲವಾರು ಸ್ಟಾಂಡ್ ಅಪ್ ಕಾಮಿಡಿ ಕಾರ್ಯಕ್ರಮಗಳ ಮೂಲಕ ಪ್ರಸಿದ್ಢರಾದ ಜಾನಿ ತಮ್ಮ ಹಿಂದೂಸ್ತಾನಿ ಲಿವರ್ ಕಂಪನಿ ಉದ್ಯೋಗ ತೊರೆದು ಪೂರ್ಣವಾಗಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡರು. ಒಂದು ಕಾರ್ಯಕ್ರಮದಲ್ಲಿ ಸುನೀಲ್ ಶೆಟ್ಟಿ ಇವರ ಪ್ರತಿಭೆ ಗುರುತಿಸಿ ಇವರಿಗೆ ತಮ್ಮ ಚಿತ್ರದಲ್ಲಿ ಅವಕಾಶ ನೀಡಿದರು.ನಂತರ ಹಲವು ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಸಾಮರ್ಥ್ಯ ನಿರೂಪಿಸಿ ಸುಮಾರು 13 ಫಿಲ್ಮ ಪೇರ್ ಪ್ರಶಸ್ತಿ ಪಡೆದಿದ್ದಾರೆ. ವಿಶ್ವದಾದ್ಯಂತ ಸ್ಟಾಂಡ್ ಅಪ್ ಕಾಮಿಡಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.


    ಕಿರುತೆರೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಮತ್ತು ತೀರ್ಪುಗಾರರಾಗಿ ಭಾಗವಹಿಸಿರುವ ಇವರು 2019 ರಲ್ಲಿ ತೆರೆಕಂಡ ಕನ್ನಡ ಚಿತ್ರ `ಗರ'ದಲ್ಲಿ ಸಾಧುಕೋಕಿಲಾ ಜೊತೆ ನಟಿಸಿ ದ್ದಾರೆ. 

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X