ಬೆಂಗಳೂರಿನ ಹತ್ತಿರ ಇರುವ ಕೋಡಿಗೆಹಳ್ಳಿಯಲ್ಲಿ ಜನಿಸಿದ ಕರಿಬಸವಯ್ಯ ಕನ್ನಡ ಚಿತ್ರರಂಗದ ಪ್ರಮುಖ ಪೋಷಕ ನಟರು ಮತ್ತು ರಂಗಭೂಮಿ ಕಲಾವಿದ. ಬಾಲ್ಯದಲ್ಲಿಯೇ `ಕಂಸಾಳೆ',`ಡೊಳ್ಳು ಕುಣಿತ',`ಹರಿಕಥೆ' ಕಲಿತ ಇವರು ನಂತರ ಶೇಷಾದ್ರಿಪುರಂ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟಂಟ್ ಆಗಿ ಕೆಲಸ ಮಾಡಿದರು. ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ ಇವರಿಗೆ `ಉಂಡು ಹೋದ ಕೊಂಡು ಹೋದ' ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟು ಬ್ರೇಕ್ ಕೊಟ್ಟಿದ್ದು ನಾಗತಿಹಳ್ಳಿ ಚಂದ್ರಶೇಖರ್.
ತಮ್ಮ ಹಾಸ್ಯ ನಟನೆಯಿಂದ ಪ್ರಸಿದ್ಧರಾಗಿದ್ಧ ಕರಿಬಸವಯ್ಯ ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 2009 ರಲ್ಲಿ ಇವರ ಪುತ್ರಿ ರಾಧಾ ಆತ್ಮಹತ್ಯೆ ಮಾಡಿಕೊಂಡ ನಂತರ ಕರಿಬಸವಯ್ಯ ಖಿನ್ನತೆಯಿಂದ ಬಹುವಾಗಿ ಬಳಲಿದರು. 2012 ರಲ್ಲಿ ರಸ್ತೆ ಅಪಘಾತಕ್ಕೀಡಾದ ಇವರು ಮೂರು ದಿನಗಳ ನಂತರ ಆಸ್ಪತ್ರೆಯಲ್ಲಿ ಮಡಿದರು.