ಕಾರ್ತಿಕ್ ಅತ್ತಾವರ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ. ಮೂಲತಃ ಮಂಗಳೂರಿನವರಾದ ಇವರು, ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಬಳಿಕ ನಟನೆಯತ್ತ ಮುಖ ಮಾಡಿದರು.
ಸಿನಿಮಾ ಜೀವನ
ಕಾರ್ತಿಕ್ ಅತ್ತಾವರ್ 'ರಿಕ್ಷಾ ಡ್ರೈವರ್' ಎಂಬ ತುಳು ಸಿನಿಮಾದ ಮೂಲಕ ನಟನೆಗೆ ಕಾರ್ತಿಕ್ ಅತ್ತಾವರ್ ಪಾದಾರ್ಪಣೆ ಮಾಡಿದರು. ಆ ಸಿನಿಮಾ ಪ್ರತಿಷ್ಠಿತ ಕರ್ನಾಟಕ ರಾಜ್ಯ ಸಿನಿಮಾ ಪ್ರಶಸ್ತಿಗೂ ಪಾತ್ರವಾಗಿತ್ತು. ವಿನೋದ್ ವಿ ದೋಂಡಾಳೆ ತಮ್ಮ 'ಯಶೋಧೆ' ಧಾರಾವಾಹಿಗೆ ನಾಯಕನ ಹುಡುಕಾಟದಲ್ಲಿದ್ದರು. ಈ ಸಂದರ್ಭ 'ರಿಕ್ಷಾ ಡ್ರೈವರ್' ಸಿನಿಮಾದಲ್ಲಿನ ಕಾರ್ತಿಕ್ ಅವರ ನಟನೆಯನ್ನು ನೋಡಿದ ವಿನೋದ್, ಕಾರ್ತಿಕ್‌ಗೆ ತಮ್ಮ ಧಾರಾವಾಹಿಯಲ್ಲಿ ನಟಿಸುವ ಅವಕಾಶ ನೀಡಿದರು. 'ಯಶೋಧೆ' ಧಾರಾವಾಹಿಯಲ್ಲಿ ಬ್ಯುಸಿನೆಸ್ ಮ್ಯಾನ್ ಆದಿತ್ಯನಾಗಿ ಕಾಣಿಸಿಕೊಂಡಿದ್ದ ಕಾರ್ತಿಕ್ ಪ್ರೇಕ್ಷಕರ ಮನಗೆದ್ದಿದ್ದರು.
ರಿಯಾಲಿಟಿ ಶೋ: ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಡ್ಯಾನ್ಸಿಂಗ್ ಸ್ಟಾರ್ ಸೀಸನ್ 2'ರ ಸ್ಪರ್ಧಿಯಾಗಿದ್ದ ಕಾರ್ತಿಕ್ ಅತ್ತಾವರ್ ನೃತ್ಯದ ಮೂಲಕ ತೀರ್ಪುಗಾರರ ಮೆಚ್ಚುಗೆಗೂ ಪಾತ್ರರಾಗಿದ್ದರು.
ಸಿನಿಮಾ
'ಅನುಕ್ತ' ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಕಾರ್ತಿಕ್ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟರು. ಈ ಸಿನಿಮಾ ಹೇಳುವಂಥ ಯಶಸ್ಸು ಏನು ಗಿಟ್ಟಿಸಿಕೊಳ್ಳದಿದ್ದರೂ ಕಾರ್ತಿಕ್ ಅತ್ತಾವರ್ ಅವರನ್ನು ಸಿನಿಪ್ರಿಯರು ಗುರುತಿಸಿದ್ದರು. ಇವರು `ಅನಮೋಲ್' ಎಂಬ ಒಂದು ಹಿಂದಿ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ವೃದ್ಧಾಶ್ರಮಕ್ಕೆ ಸಂಬಂಧಿಸಿದ ಕಥೆಯನ್ನು ಹೊಂದಿದ್ದ ಆ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು.
ಕಂಬ್ಯಾಕ್
ಕಳೆದ 9 ವರ್ಷಗಳಿಂದ ನಟನೆಯಿಂದ ದೂರವಿದ್ದ ಕಾರ್ತಿಕ್, 'ಶ್ರೀಗೌರಿ' ಮೂಲಕ ಕಿರುತೆರೆಗೆ ಮರಳಿದ್ದಾರೆ.