Celebs » Kishore » Biography
ಜೀವನಚರಿತ್ರೆ

ಕಿಶೋರ್ (ಕಿಶೋರ್ ಕುಮಾರ್ .ಜಿ) ಇವರು ಜನಿಸಿದ್ದು 14 ಅಗಸ್ಟ್ 1974 ರಲ್ಲಿ. ಇವರು ಬೆಂಗಳೂರಿನ ನ್ಯಾಷನಲ್ ಕಾಲೇಜ್ ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ನಂತರ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಮಾಸ್ಟರ್ ಡಿಗ್ರಿಯನ್ನು ಪಡೆದುಕೊಂಡು ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ಉಪನ್ಯಾಸ ಮಾಡುವವುದರ ಜೊತೆಗೆ ಫ್ಯಾಶನ್ ಡಿಸೈನರ್ ಆಗಿ ಕೆಲಸ ಮಾಡಿದರು.

ಇವರು ಕಾಲೇಜ್‌ ಥಿಯೇಟರ್‌ಗಳಲ್ಲಿ ನಾಟಕ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಕನ್ನಡದ 'ಕಂಠಿ' ಸಿನಿಮಾ ಆರಂಭವಾಗಿತ್ತು. ಅಲ್ಲಿದ್ದ ಇವರ ಸ್ನೇಹಿತನ ಕಡೆಯಿಂದ ಇವರಿಗೆ ಆಕಸ್ಮಿಕವಾಗಿ ಆಕ್ಟ್ ಮಾಡಲು ಅವಕಾಶ ಸಿಕ್ತು. ಅಂದಿನಿಂದ ಇವರ ಸಿನಿಮಾ ಜೀವನ ಮುಂದುವರೆಯಿತು.  ಹೀಗೆ ಇವರು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಇವರು ನಟಿಸಿ ಸೈ ಎನಿಸಿಕೊಂಡಿದ್ದಾರೆ.