twitter

    ಕೃತಿಕಾ ರವೀಂದ್ರ್ ಜೀವನಚರಿತ್ರೆ

    ಕೃತಿಕಾ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. `ಮನೆಮಗಳು' ಧಾರಾವಾಹಿ ಮೂಲಕ ಮನೆಮಾತಾಗಿರುವ ಇವರು ಮಲೆನಾಡಿನವರು.

    ತಂದೆ ರವೀಂದ್ರರು ಆಯುರ್ವೇದ ವೈದ್ಯರು, ತಾಯಿ ಮೀನಾಕ್ಷಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಬಾಲನಟಿಯಾಗಿ `ಜಿಂಬಾ' ಧಾರಾವಾಹಿಯಲ್ಲಿ ನಟಿಸಿದ್ದ ಇವರು ಮುಂದೆ `ಮನೆ ಮಗಳು' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡರು. ನಂತರ `ರಾಧಾ ಕಲ್ಯಾಣ'ದ ರಾಧಿಕಾ ಪಾತ್ರ ಇವರಿಗೆ ಇನ್ನಷ್ಟು ಹೆಸರು ತಂದು ಕೊಟ್ಟಿತು.

    ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್‌ಬಾಸ್‌ನಲ್ಲಿ ಭಾಗವಹಿಸಿ ಸುಮಾರು 63 ದಿನಗಳ ಕಾಲ ಬಿಗ್‌ಬಾಸ್ ಮನೆಯಲ್ಲಿದ್ದರು. `ಪಟ್ರೆ ಲವ್ಸ್ ಪದ್ಮಾ' ಚಿತ್ರದಿಂದ ಇವರ ಸಿನಿಪಯಣ ಆರಂಭವಾಯಿತು. ನಂತರ `ಆಟ',`ಕೆಂಗುಲಾಬಿ',`ಯಾರಿಗೆ ಯಾರುಂಟು' ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.ಇವರ ಕೆಂಗುಲಾಬಿ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X