ಲೋಕೇಶ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಹಾಸ್ಯ ನಟ. ಸೀತಾರಾಮ ಕಲ್ಯಾಣ, ಪ್ರಯಾಣಿಕರ ಗಮನಕ್ಕೆ, ಕೆಲವು ದಿನಗಳ ನಂತರ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರರಂಗಕ್ಕೂ ಬರುವ ಮುನ್ನ ಲೋಕೇಶ್ ತುಂಬಾ ಕರುಣಾಜನಕ ಹಿನ್ನಲೆಯಿಂದ ಬಂದವರು. ಭಿಕ್ಷೆ ಬೇಡಿಕೊಂಡು, ಕಬ್ಬನ ಪಾರ್ಕ್ ಗೆ ಬರುವ ಜೋಡಿಗಳಿಂದ ಸುಲಿಗೆ ಮಾಡಿ ಜೀವನ ನೆಡೆಸುತ್ತಿದ್ದರು. ಕೊನೆಗೆ ಡಾನ್ ಬಾಸ್ಕೋ ತಂಡ ಲೋಕೇಶ್ ಅವರಿಗೆ ಹೊಸ ಜೀವನ ನೀಡಿತು. ಪ್ರಸ್ತುತ ಚಿತ್ರಕಲೆ, ನಟನೆ ಮಾಡಿಕೊಂಡು ಬಾಳುತ್ತಿದ್ದಾರೆ.
ಇವರು ಕಿಚ್ಚ ಸುದೀಪ್ ನಿರೂಪಣೆಯ, ವೂಟ್ ನಲ್ಲಿ ಪ್ರಸಾರವಾಗುವ ಮೊದಲ ಓಟಿಟಿ ಬಿಗ್ ಬಾಸ್ ನಲ್ಲಿ ಸ್ಫರ್ದಿಯಾಗಿ ಭಾಗವಹಿಸಿದ್ದರು.