ಮಲೈಕಾ ಟಿ ವಸುಪಾಲ್ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಇವರು 1993ರಂದು ಜೂನ್ 18ರಂದು ದಾವಣಗೆರೆಯಲ್ಲಿ ಜನಿಸಿದರು.
ಈ ಚೆಲುವೆಗೆ ಬಾಲ್ಯದಿಂದಲೂ ಆ್ಯಕ್ಟಿಂಗ್ ಅಂದರೆ ಪ್ರಾಣ. ತಂದೆ ತಾಯಿ ಒತ್ತಾಯಕ್ಕೆ ಇಂಜಿನಿಯರಿಂಗ್ ಪದವಿ ಪಡೆದರು. ಮಗಳು ನಟನೆಗೆ ಹೋಗುವ ಮೊದಲು ತನ್ನ ಕರಿಯರ್‌ಗೆ ಸಾಕಾಗುವಷ್ಟು ಶಿಕ್ಷಣ ಪಡೆಯಲಿ ಎಂಬುದು ತಂದೆ-ತಾಯಿಗಳ ಆಸೆಯಾಗಿತ್ತು. ನಂತರ ಹಲವು ಸೀರಿಯಲ್ ಅಡಿಷನ್‌ಗಳಿಗಾಗಿ ದಾವಣಗೆರೆಯಿಂದ ಬೆಂಗಳೂರು ಓಡಾಟ ಶುರುಮಾಡಿದರು. ಈ ಸಂದರ್ಭ ದೀಲಿಪ್ ರಾಜ್ ತಮ್ಮ ಹಿಟ್ಲರ್ ಕಲ್ಯಾಣಕ್ಕಾಗಿ ಮುಗ್ದ ಮುಖದ ಸುಂದರಿಯ ಹುಡುಕಾಟದಲ್ಲಿದ್ದರು. ಆಗ ಸಿಕ್ಕಿದ್ದೇ ಎಡವಟ್ಟು ರಾಣಿ ಲೀಲಾ. ಈ ಸೀರಿಯಲ್ ಮೂಲಕ ಮಲೈಕಾ ಕರ್ನಾಟಕದ ಮನೆಮಾತಾದರು.
ಬೆಳ್ಳಿತೆರೆಗೆ ಎಂಟ್ರಿ
ಮಲೈಕಾ ಟಿ ವಸುಪಾಲ್ ಇದೀಗ ಚಿಕ್ಕಣ್ಣ ಅಭಿನಯದ 'ಉಪಾಧ್ಯಕ್ಷ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.