ಮಾನಸಿ ಸುಧೀರ್ ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ಕಲಾವಿದೆ. ಉಡುಪಿ ಮೂಲದ ಇವರು, ವೃತ್ತಿಯಲ್ಲಿ ಶಿಕ್ಷಕಿ. ತಮ್ಮ ವಿಧ್ಯಾಭ್ಯಾಸವನ್ನು ಪೂರ್ಣಪ್ರಜ್ಙ ಕಾಲೇಜಿನಲ್ಲಿ ಮುಗಿಸಿದ್ದಾರೆ. ಜೊತೆಗೆ ಭರತನಾಟ್ಯ ಕಲಾವಿದೆಯಾಗಿರುವ ಮಾನಸಿ ಸುಧೀರ್ ಅವರು, ಪತಿ ವಿದ್ವಾನ್ ಸುಧೀರ್ ಅವರೊಂದಿಗೆ ನೃತ್ಯ ಶಾಲೆ ನಡೆಸುತ್ತಿದ್ದಾರೆ.
ಮಾನಸಿ ಸುಧೀರ್ ಅವರು ಲಾಕ್‌ಡೌನ್ ಸಂದರ್ಭಗಳಲ್ಲಿ ಅಭಿನಯ ಗೀತೆಗಳನ್ನು ಹಾಡಿ, ಅದಕ್ಕೆ ತಕ್ಕಂತೆ ನಟಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದರು. ಈ ವಿಡಿಯೋಗಳು ಸಖತ್ ವೈರಲ್ ಆಗಿದ್ದವು. ಅನೇಕ ರಂಗಕರ್ಮಿಗಳು ಮಾನಸ ಸುಧೀರ್ ಅವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಬೆಳ್ಳಿತೆರೆ
ಸಿನಿಮಾರಂಗದಲ್ಲಿಯೂ ಸಕ್ರಿಯವಾಗಿರುವ ಮಾನಸಿ, 2000ನೇ ಇಸವಿಯಲ್ಲಿ ಸುನೀಲ್ ದೇಸಾಯಿ ಅವರ 'ರಮ್ಯಾ ಚೈತ್ರಾ ಕಾಲ' ಸಿನಿಮಾದಲ್ಲಿ ನಟಿಸಿದ್ದರು. ಆನಂತರ ರಾಘವೇಂದ್ರ ರಾಜ್‌ಕುಮಾರ್ ಪ್ರಮುಖ ಭೂಮಿಕೆಯಲ್ಲಿರುವ `ಅಮ್ಮನ ಮನೆ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು.
2022ರಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದಲ್ಲಿ ಶಿವನ ತಾಯಿಯಾಗಿ ಪ್ರಮುಖ ಪಾತ್ರ ನಿರ್ವಹಿಸಿದ ಇವರು, ಹೆಚ್ಚು ಜನಪ್ರಿಯತೆ ಗಳಿಸಿದರು.
ಕಾಂತಾರದಲ್ಲಿ ತಾಯಿಯಾಗಿ ನಟಿಸಿರುವ ಮಾನಸಿ ಸುಧೀರ್ ಕುರಿತ ಆಸಕ್ತಿಕರ ವಿಷಯಗಳಿವು