twitter

    ಮಾಸ್ಟರ್ ಹಿರಣ್ಣಯ್ಯ ಜೀವನಚರಿತ್ರೆ

    ಮಾಸ್ಟರ್ ಹಿರಣ್ಣಯ್ಯ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ, ಚಿತ್ರಸಾಹಿತಿ, ಹಿನ್ನಲೆ ಗಾಯಕಿ ಮತ್ತು ರಂಗಕರ್ಮಿ. ಮೈಸೂರಿನಲ್ಲಿ ಜನಿಸಿದ ಇವರು ಶಾರದಾ ವಿಲಾಸ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಮುಗಿಸಿದರು. ಬಾಲ್ಯದಲ್ಲಿ ತಮ್ಮ ಶಿಕ್ಷಣದ ಖರ್ಚಿಗಾಗಿ ಸಾಧ್ವಿ ಎಂಬ ಪತ್ರಿಕೆ ವಿತರಿಸುತ್ತಿದ್ದರು.


    ಬಾಲ್ಯದಿಂದಲೇ ರಂಗಭೂಮಿಯತ್ತ ಆಕರ್ಷಿತರಾಗಿದ್ದರು. ತಂದೆಯವರ ನಿಧನಾನಂತರ `ಕೆ.ಹಿರಣ್ಣಯ್ಯ ಮಿತ್ರಮಂಡಳಿ' ನಾಟಕ ಮಂಡಳಿಯನ್ನು ಮುನ್ನಡೆಸುತ್ತಾ ಮುಂದುವರೆದ ಇವರು ನಾಟಕ ರಚನೆ, ನಿರ್ದೇಶನದಲ್ಲಿ ತೊಡಗಿಕೊಂಡರು. ಇವರು ತಮ್ಮ ಪ್ರಸಿದ್ಧ ನಾಟಕ `ಲಂಚಾವತಾರ'ದ ಮೂಲಕ ಸಮಾಜದಲ್ಲಿರುವ ಲಂಚದ ಪೀಡಗನ್ನು ಕಟುವಾಗಿ ಟೀಕಿಸಿದರು. ತಮ್ಮ ತಂದೆಯ ಹೆಸರಿನಲ್ಲಿ `ಹಿರಣ್ಣಯ್ಯ' ಪ್ರಶಸ್ತಿ ಕೂಡ ಸ್ಥಾಪಿಸಿದ್ದಾರೆ.


    ಚೋರ ಗುರು ಚಂಡಾಲ ಶಿಷ್ಯ, ಆಪರೇಷನ್ ಅಂತ, ಹರಕೆಯ ಕುರಿ ಸೇರಿದಂತೆ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹಿರಣ್ಣಯ್ಯನವರು ವಿದೇಶಗಳಲ್ಲಿಯೂ ಕೂಡ ತಮ್ಮ ನಾಟಕ ಪ್ರದರ್ಶನ ನೀಡಿದ್ದಾರೆ. ಇವರ ಪ್ರಸಿದ್ಧ ಲಂಚಾವತಾರ ನಾಟಕ ಸುಮಾರು 12500 ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.


    ಮೇ 2, 2019 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X