ಮೇಘಾ ಶೆಟ್ಟಿ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಇವರು 1998ರ ಆಗಸ್ಟ್ 4ರಂದು ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಬಂಟ್ ಕುಟುಂಬದಲ್ಲಿ ಜನಿಸಿದರು. ಮೇಘಾ ಬೆಂಗಳೂರಿನಲ್ಲಿ ಎಂಬಿಎ ವಿಧ್ಯಾಭ್ಯಾಸವನ್ನು ಮುಗಿಸಿದ್ದಾರೆ.
ಕಿರುತೆರೆ
ಮೇಘಾ ಶೆಟ್ಟಿ 2019ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಜೊತೆ ಜೊತೆಯಲಿ' ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಈ ಧಾರವಾಹಿಯಲ್ಲಿ 'ಅನು ಸಿರಿಮನೆ' ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದರು.
ಬೆಳ್ಳಿತೆರೆ
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ತ್ರಿಬಲ್ ರೈಡಿಂಗ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮೇಘಾ ಚಂದನವನ ಪ್ರವೇಶಿಸಿದರು. ನಂತರ ಡಾರ್ಲಿಂಗ್ ಕೃಷ್ಣ ಜೊತೆ ದಿಲ್ ಪಸಂದ್ ಚಿತ್ರದಲ್ಲಿ ನಟಿಸಿದರು. ಸದ್ಯ ವಿನಯ್ ರಾಜ್‌ಕುಮಾರ್ ಅಭಿನಯದ ಗ್ರಾಮಾಯಣ ಚಿತ್ರದಲ್ಲಿ ನಟಿಸುತ್ತಿದ್ದಾರೆ.