twitter
    Celebs»Mohini»Biography

    ಮೋಹಿನಿ ಜೀವನಚರಿತ್ರೆ

    ಮೋಹಿನಿ ಕ್ರಿಸ್ಟಿನಾ ಶ್ರೀನಿವಾಸನ್ ಕನ್ನಡ, ತಮಿಳು, ತೆಲಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ನಟಿ. 1976 ರಲ್ಲಿ ಚೆನ್ನ್ನೈನಲ್ಲಿ ಜನಿಸಿದ ಮೋಹಿನಿ ಬಾಲ್ಯದ ಹೆಸರು ಮಹಾಲಕ್ಷ್ಮಿ. ಹೆಚ್ಚಾಗಿ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಇವರು  ಭರತ್ ಎಂಬುವವರನ್ನು ಮದುವೆಯಾಗಿ ಅಮೇರಿಕಾದಲ್ಲಿ ನಲೆಸಿದ್ದಾರೆ.

    1991 ರಲ್ಲಿ ತೆರೆಕಂಡ `ಎರಮನೆ ರೋಜವೇ' ತಮಿಳು ಚಿತ್ರದಿಂದ ಸಿನಿಪಯಣ ಆರಂಭಿಸಿದ ಮೋಹಿನಿ ನಂತರ ಮಲಯಾಳಂ ಚಿತ್ರರಂಗದಲ್ಲಿ ಮಿಂಚತೊಡಗಿದರು. 1992 ರಲ್ಲಿ ತೆರೆಕಂಡ `ಕಲ್ಯಾಣ ಮಂಟಪ' ಚಿತ್ರದಿಂದ ಕನ್ನಡ ಸಿನಿರಂಗ ಪ್ರವೇಶಿಸಿದರು. ನಂತರ ಶ್ರೀರಾಮಚಂದ್ರ, ಗಡಿಬಿಡಿ ಅಳಿಯ, ರೌಡಿ ಮುಂತಾದ ಚಿತ್ರಗಳಲ್ಲಿ ನಟಿಸಿದರು. 1999 ರಲ್ಲಿ ವಿವಾಹವಾದ ನಂತರ ಅಮೇರಿಕಾಗೆ ತೆರೆಳಿದ ಮೋಹಿನಿ ಚಿತ್ರರಂಗಕ್ಕೆ ವಿದಾಯ ಹೇಳಿದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.

    ಬ್ರಾಹ್ಮಣರಾಗಿದ್ದ ಇವರು 2006 ರಲ್ಲಿ ಕ್ರೈಸ್ತ್ ಧರ್ಮಕ್ಕೆ ಮತಾಂತರಗೊಂಡರು. ಪ್ರಸ್ತುತ ಕ್ರೈಸ್ತ್ ಧರ್ಮದ ಕೌನ್ಸಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X