twitter
    Celebs»N Veeraswamy»Biography

    N ವೀರಸ್ವಾಮಿ ಜೀವನಚರಿತ್ರೆ

    ಅದ್ಧೂರಿ ಚಿತ್ರಗಳ ನಿರ್ಮಾಣಕ್ಕೆ ಪ್ರಸಿದ್ಧರಾದ ನಾಗಪ್ಪ ವೀರಾಸ್ವಾಮಿ ಕನ್ನಡ ಚಿತ್ರರಂಗದ ಪ್ರಸಿದ್ಧ ಚಿತ್ರ ನಿರ್ಮಾಪಕ. 60ರ ದಶಕದಿಂದ ನಿರ್ಮಾಪಕರಾಗಿ ಸೇವೆಸಲ್ಲಿಸತೊಡಗಿದ ಇವರು ಕನ್ನಡದದಲ್ಲಿ ಸುಮಾರು 17, ಹಿಂದಿ ಮತ್ತು ತಮಿಳಿನಲ್ಲಿ ತಲಾ ಒಂದು ಚಿತ್ರಗಳನ್ನು ನಿರ್ಮಿಸಿದ್ದಾರೆ.ಇವರು ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ತಂದೆ.
    ತಮಿಳು ಮಾತನಾಡುವ ಮದ್ರಾಸಿ ಕುಟುಂಬದಲ್ಲಿ ಜನಿಸಿದ ಇವರು ಮೊದಲು ಚಿತ್ರವಿತರಕರಾಗಿ ಗುರುತಿಸಿಕೊಂಡರು.ನಂತರ `ಈಶ್ವರಿ ಪ್ರೋಡಕ್ಷನ್ ಎಂಬ ಸಂಸ್ಥೆ ಹುಟ್ಟು ಹಾಕಿ ಚಿತ್ರ ನಿರ್ಮಾಣದಲ್ಲಿ ತೋಡಗಿದರು. 
    ಇವರು ನಿರ್ಮಸಿದ ಮೊದಲ ಚಿತ್ರ 1971ರಲ್ಲಿ ತೆರೆಕಂಡ ಡಾ.ರಾಜಕುಮಾರ್ ನಟಿಸಿದ `ಕುಲಗೌರವ' . ನಂತರ `ನಾಗರಹಾವು',`ಭೂತಯ್ಯನ ಮಗ ಅಯ್ಯು'`ನಾ ನಿನ್ನ ಮರೆಯಲಾರೆ',`ನಾರದ ವಿಜಯ',`ಚಕ್ರವ್ಯೂಹ' ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದರು. ಹಾಗೆಯೇ ತಮ್ಮ ಪುತ್ರ ರವಿಚಂದ್ರನ್ ನಾಯಕನಟನಾಗಿ ಅಭಿನಯಿಸಿದ `ಸಾವಿರ ಸುಳ್ಳು',`ನಾನು ನನ್ನ ಹೆಂಡ್ತಿ',`ಕಿಂದರಿ ಜೋಗಿ',`ರಾಮಾಚಾರಿ',`ಹಳ್ಳಿ ಮೇಷ್ಟ್ರು',`ಗೋಪಿ ಕೃಷ್ಣ' ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X