X
ನಿತ್ಯ ರಾಮ್
Actress

ನಿತ್ಯ ರಾಮ್ ಜೀವನ ಚರಿತ್ರೆ

ನಿತ್ಯಾ ರಾಮ್ ಕನ್ನಡ,ತೆಲಗು ಮತ್ತು ತಮಿಳು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಜನಪ್ರಿಯ ನಟಿ.ತುಂಬು ಕಲಾವಿದರ ಕುಟುಂಬದಿಂದ ಬಂದಿರುವ ಇವರು ಶಾಸ್ತ್ರೀಯ ನೃತ್ಯ ಪಾರಂಗತೆ.1990 ರಲ್ಲಿ ಕರ್ನಾಟಕದ ಹುಬ್ಬಳ್ಳಿಯಲ್ಲಿ ಜನಿಸಿದರು.ಇವರ ತಂದೆ ಕೆ.ಎಸ್ ರಾಮು ಸುಮಾರು 500 ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿರುವ ಪ್ರಖ್ಯಾತ ಭರತನಾಟ್ಯ ಕಲಾವಿದರು. ಇವರ ಸಹೋದರಿ ರಚಿತಾ ರಾಮ್ ಪ್ರಸ್ತುತ ಕನ್ನಡದ ಟಾಪ್ ನಟಿ.2014 ರಲ್ಲಿ ವಿನೋದ್ ಗೌಡ ಎಂಬುವವರ ಜೊತೆ ಸಪ್ತಪದಿ ತುಳಿದಿರುವ ಇವರು ಬಯೋಟೆಕ್ನಾಲಜಿಯಲ್ಲಿ ಪದವಿ ಪಡೆದು ಕೆಲಕಾಲ ಉದ್ಯೋಗದಲ್ಲಿದ್ದರು.ನಂತರ ನಟನೆಯೆಡೆಗಿನ ಪ್ರಬಲವಾದ ಆಸಕ್ತಿಯಿಂದ ಉದ್ಯೋಗ ತೊರೆದು ಅಭಿನಯದೆಡೆಗೆ ಸಂಪೂರ್ಣ ಗಮನ ಹರಿಸಿದರು. ಇವರು `ವಿಲೈಟ್' ಅಕಾಡೆಮಿಯಿಂದ ಶಾಸ್ತ್ರೀಯ ಸಂಗೀತ ಕಲಿತಿದ್ದಾರೆ.

ಕಿರುತೆರೆ ಪಯಣ

ಕನ್ನಡದಲ್ಲಿ ಆರು, ತಮಿಳು ಮತ್ತು ತೆಲಗುವಿನಲ್ಲಿ ತಲಾ ಎರಡರಂತೆ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.2010 ರಲ್ಲಿ ಜೀ ಕನ್ನಡದ `ಬೆಂಕಿಯಲ್ಲಿ ಅರಳಿದ ಹೂವು' ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಪ್ರವೇಶಿಸದರು.ಈ ಧಾರಾವಾಹಿಯಲ್ಲಿ `ಮಲ್ಲಿ' ಪಾತ್ರದಲ್ಲಿ ಹಳ್ಳಿ ಯುವತಿಯ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದರು. ಇದೇ ಸೀರಿಯಲ್‌ ಮೂಲಕ ಇವರ ಸಹೋದರಿ ರಚಿತಾ ರಾಮ್ ಕೂಡ ಅಭಿನಯ ಪ್ರಾರಂಭಿಸಿದ್ದು.ನಂತರ `ಕರ್ಪೂರದ ಗೊಂಬೆ',`ರಾಜಕಮಾರಿ',`ಎರಡು ಕನಸು' ಕನ್ನಡ ಧಾರಾವಾಹಿಗಳಲ್ಲಿ ನಟಿಸಿದರು.2012 ರಲ್ಲಿ ತಮಿಳಿನ `ಅವಳ್' ಸೀರಿಯಲ್ ಮೂಲಕ ತಮಿಳು ಕಿರುತೆರೆ ಪ್ರವೇಶಿಸಿದರು. ನಂತರ ತೆಲಗುವಿನಲ್ಲಿ `ಮುದ್ದು ಬಿಡ್ಡ',`ಅಮ್ಮಾ ನಾ ಕೊಡಲ' ಧಾರಾವಾಹಿಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರಿಗೂ ಹತ್ತಿರವಾದರು.2015 ರಲ್ಲಿ `ಮುದ್ದು ಮನಸೇ' ಎಂಬ ಕನ್ನಡ ಚಿತ್ರದಲ್ಲಿ ನಟಿಸಿದರು.

2017 ರಲ್ಲಿ ಆರಂಭವಾದ `ನಂದಿನಿ' ಎಂಬ ಕನ್ನಡ ಮತ್ತು ತಮಿಳು ದ್ವಿಭಾಷಾ ಸೀರಿಯಲ್ ಇವರಿಗೆ ತುಂಬಾ ಖ್ಯಾತಿ ತಂದುಕೊಟ್ಟಿತು. ಈ ಧಾರಾವಾಹಿ ಶ್ರೀಲಂಕಾದ ಸಿಂಹಳ ಭಾಷೆ,ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಕೂಡ ಡಭ್ ಆಗಿ ಪ್ರಸಾರವಾಗುತ್ತಿದೆ.ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಪ್ರಸಾರವಾದ ಸೀರಿಯಲ್ ಎಂಬ ಖ್ಯಾತಿ `ನಂದಿನಿ' ಧಾರಾವಾಹಿ ಪಡೆಯಿತು. ಈ ಸೀರಿಯಲ್‌ನಲ್ಲಿನ ನಟನೆಗಾಗಿ ನಿತ್ಯಾಗೆ 2018 ರ ಸನ್ ಕುಟುಂಬದ `ಅತ್ತ್ಯುತ್ತಮ ನಟಿ' ಪ್ರಶಸ್ತಿ ಸಿಕ್ಕಿತು.

ರಿಯಾಲಿಟಿ ಶೋ

ಪ್ರಸ್ತುತ ತಮಿಳಿನ `ಮಸಾಲಾ ಕೆಫೆ',`ಅಸ್ಥಲ್ ಚುಟ್ಟೀಸ್' ಮತ್ತು ಕನ್ನಡದ `ಕಿಲಾಡಿ ಕಿಡ್ಸ್' ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದಯ ಟಿವಿಯ `ಸವಾಲಿಗೆ ಸೈ' ಎಂಬ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+