twitter
    Celebs»Prabhu Deva»Biography

    ಪ್ರಭು ದೇವ ಜೀವನಚರಿತ್ರೆ

    ಕರ್ನಾಟಕದ ಮೈಸೂರಲ್ಲಿ ಜನಿಸಿದ ಪ್ರಭುದೇವ ಭಾರತೀಯ ಚಿತ್ರರಂಗದ ಅದ್ಭುತ ನ್ಯತ್ಯ ಸಂಯೋಜಕ,ನಟ,ನಿರ್ದೇಶಕ. ಇವರು ಇಂಡಿಯನ್ ಮೈಕಲ್ ಜಾಕ್ಸನ್ ಅಂತಲೇ ಹೆಸರು ಮಾಡಿದ್ದಾರೆ.


    1973 ರಲ್ಲಿ ಮೈಸೂರಿನಲ್ಲಿ ಜನಿಸಿದ ಇವರು ಬೆಳೆದಿದ್ದೆಲ್ಲ ಚೆನ್ನೈನಲ್ಲಿ . ಇವರು ತಂದೆ ದಕ್ಷಿಣ ಭಾರತದ ಖ್ಯಾತ ನೃತ್ಯ ನಿರ್ದೇಶಕ ಮೂಗೂರು ಸುಂದರಂ. ತಂದೆಯಿಂದ ಸ್ಪೂರ್ತಿ ಪಡೆದ ಇವರು `ಭರತನಾಟ್ಯ',`ಪಾಶ್ಚಾತ್ಯ ನೃತ್ಯ' ಕಲಿತರು. ಇವರ ಸಹೋದರರಾದ `ರಾಜು ಸುಂದರಂ' ಮತ್ತು `ನಾಗೇಂದ್ರ ಪ್ರಸಾದ' ಕೂಡ ನೃತ್ಯ ಸಂಯೋಜಕರು ಮತ್ತು ನಟರು. ನೂರಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಪ್ರಭು ದೇವ, ಎರಡು ಬಾರಿ `ಅತ್ತುತ್ತಮ ನೃತ್ಯ ಸಂಯೋಜಕ' ಪ್ರಶಸ್ತಿ ಪಡೆದಿದ್ದಾರೆ.


    ಇವರು ನಾಯಕನಟನಾಗಿ ನಟಿಸಿದ ಮೊದಲ ಚಿತ್ರ `ಕಾಧಲನ್'. ಈ ಚಿತ್ರದ ನಾಯಕಿ `ನಗ್ಮಾ'. ಇವರು ತಮ್ಮ ಇಬ್ಬರು ಸಹೋದರರ ಜೊತೆಗೂಡಿ 123 ಚಿತ್ರದಲ್ಲಿ ನಟಿಸಿದ್ದಾರೆ.

     

    ತೆಲುಗು ಚಿತ್ರ `ನುವ್ವೊಸ್ತಾನಂತೆ ನೇನೊದ್ದಂಟಾನಾ' ದಿಂದ ನಿರ್ದೇಶನಕ್ಕಿಳಿದ ಇವರು ಮುಂದೆ `ಪೌರ್ಣಮಿ',`ಪೊಕಿರಿ',`ಶಂಕರದಾದಾ ಜಿಂದಾಬಾದ್',`ವಿಲ್ಲು' `ವಾಂಟೆಡ್',`ರೌಡಿ ರಾಥೋಡ್',`ರಾಮಯ್ಯ ವಸ್ತಾವಯ್ಯ',`ಸಿಂಗ್ ಇಜ್ ಬ್ಲಿಂಗ್' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X