ಪ್ರದೀಪ್ ರಾವುತ್ ಬಾಲಿವುಡ್ ಮತ್ತು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ. ಬಿ.ಆರ್.ಚೋಫ್ರಾ ನಿರ್ದೇಶನದ `ಮಹಾಭಾರತ' ಸೀರಿಯಲ್‌ನ ಅಶ್ವತ್ಥಾಮ ಪಾತ್ರದಿಂದ ಗಮನ ಸೆಳೆದರು.
ಮುಂಬೈನಲ್ಲಿ ನೆಲೆಸಿರುವ ಇವರು ಹಿಂದಿಯಲ್ಲಿ `ಸರ್ಪರೋಷ',`ಲಗಾನ್',`ಗಜಿನಿ' ಮುಂತಾದ ಚಿತ್ರಗಳಲ್ಲಿನ ಅಭಿನಯದಿಂದ ಪ್ರಸಿದ್ದರಾಗಿದ್ದಾರೆ.
2007 ರಲ್ಲಿ ತೆರೆಕಂಡ ಉಪೇಂದ್ರರ `ಪರೋಡಿ' ಚಿತ್ರದಿಂದ ಕನ್ನಡಕ್ಕೆ ಬಂದರು. ಇವರಿಗೆ ಕನ್ನಡದಲ್ಲಿ ಹೆಸರು ತಂದುಕೊಟ್ಟ ಚಿತ್ರ `ಗಜ'. ಈ ಚಿತ್ರದ ನಂತರ `ಅಭಯ್',`ಬಚ್ಚನ್',ಶಿವಲಿಂಗ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.