ಪ್ರಣೀತಾ ಸುಭಾಷ್ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ. 2010 ರಲ್ಲಿ ತೆರೆಕಂಡ ದರ್ಶನ್‌ರ `ಪೊರ್ಕಿ' ಚಿತ್ರದಿಂದ ಸಿನಿಪಯಣ ಆರಂಭಿಸಿದರು.
ಪ್ರಣೀತಾ ಜನಿಸಿದ್ದು ಬೆಂಗಳೂರಿನಲ್ಲಿ. ತಂದೆ ಸುಭಾಷ್ ಮತ್ತು ತಾಯಿ ಜಯಶ್ರೀ ವೈದ್ಯರು.ಈ ದಂಪತಿಗಳು ಬೆಂಗಳೂರಿನಲ್ಲಿ ಒಂದು ಆಸ್ಪತ್ರೆಯನ್ನು ನೆಡೆಸುತ್ತಿದ್ದಾರೆ.
ಸಿನಿಪಯಣ
ಮಾಡೆಲಿಂಗ್ ಮೂಲಕ ಚಿತ್ರರಂಗ ಪ್ರವೇಶಿಸಿದ ಇವರು ದರ್ಶನ್‌ರ `ಪೊರ್ಕಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ನಂತರ ತೆಲುಗುವಿನಲ್ಲಿ ಸಿದ್ಧಾರ್ಥ ಜೊತೆ `ಭಾವ' ಚಿತ್ರದಲ್ಲಿ ನಟಿಸಿ ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು.
ತಮ್ಮ ಚಿತ್ರಗಳ ಆಯ್ಕೆಯಲ್ಲಿ ಜಾಗ್ರತೆ ವಹಿಸುವ ಇವರು ನಂತರ ತಮಿಳು ಮತ್ತು ತೆಲುಗುವಿನಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದರು.ಕನ್ನಡದಲ್ಲಿ `ಜರಾಸಂಧ',`ಬ್ರಹ್ಮ',`ಅಂಗಾರಕ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ರಾಯಭಾರಿ ಮತ್ತು ಉದ್ಯಮಿ
ಜಾಯಲುಕ್ಕಾಸ್, ಬಾಂಬೆ ಜ್ಯುವೆಲರಿ, ಶ್ರೀ ಲಕ್ಷ್ಮಿ ಜ್ಯುವೆಲರಿ ಮುಂತಾದ ಮಳಿಗೆಗಳ ರಾಯಭಾರಿಯಾಗಿರುವ ಇವರು ಒಂದು ಹಾಸ್ಪಿಟಾಲಿಟಿ ಉದ್ಯಮದಲ್ಲಿ ಹೆಚ್ಚು ಶೇರುಗಳನ್ನು ಹೊಂದಿರುವ ಇವರು ಬೆಂಗಳೂರಿನಲ್ಲಿ ಒಂದು ರೆಸ್ಟೊರೆಂಟ್ ಒಂದನ್ನು ಹೊಂದಿದ್ದಾರೆ.