Celebs»Prashanth Neel»Biography

  ಪ್ರಶಾಂತ್ ನೀಲ್ ಜೀವನಚರಿತ್ರೆ

  ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಪ್ರಸಿದ್ದರಾಗಿದ್ದಾರೆ. 2014 ರಲ್ಲಿ ತೆರೆಕಂಡ ಶ್ರೀಮುರುಳಿ ಅಭಿನಯದ `ಉಗ್ರಂ' ಚಿತ್ರದಿಂದ ನಿರ್ದೇಶಕರಾಗಿ ಕನ್ನಡ ಸಿನಿರಂಗ ಪ್ರವೇಶಿಸಿದರು. `ಉಗ್ರಂ' ಚಿತ್ರಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿತು. ಚಿತ್ರ ನಿರ್ದೇಶನದಲ್ಲಿ ತರಬೇತಿ ಪಡೆದ ನೀಲ್ ತಮ್ಮ ಸಹೋದರ ಸಂಬಂಧಿಯಾದ ರೋರಿಂಗ್ ಸ್ಟಾರ್ ಶ್ರೀಮುರಳಿಯ ಹಾವಭಾವವನ್ನು ಅಧ್ಯಯನ ಮಾಡಿ ಅವರಿಗಾಗಿಯೇ ಉಗ್ರಂ ಚಿತ್ರದ ಕಥೆ ಬರೆದು ನಿರ್ದೇಶಿಸಿದರು. ಈ ಚಿತ್ರ 2014 ರ ಅತಿದೊಡ್ಡ ಬ್ಲಾಕ ಬ್ಲಸ್ಟರ್ ಆಗಿ ದಾಖಲಾಯಿತು. ನಂತರ ರಾಕಿಂಗ್ ಸ್ಟಾರ್ ಯಶ್ ಗಾಗಿ ಕೆ.ಜಿ.ಎಫ್ ಚಿತ್ರ ನಿರ್ದೇಶಿಸಲು ಮುಂದಾದರು. 2018 ರಲ್ಲಿ ಪೂರ್ಣಗೊಂಡ ಈ ಚಿತ್ರ ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು , ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ತೆರೆ ಕಾಣುತ್ತಿದೆ. ಈ ಚಿತ್ರ ಕನ್ನಡ ಚಿತ್ರರಂಗದ ದಶೆಯನ್ನು ಬದಲಿಸುವ ಎಲ್ಲಾ ಲಕ್ಷಣಗಳನ್ನು ತೋರುತ್ತಿದೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X