twitter
    Celebs»Priyanka S»Biography

    ಪ್ರಿಯಾಂಕಾ ಶಿವಣ್ಣ ಜೀವನಚರಿತ್ರೆ

    ಪ್ರಿಯಾಂಕಾ ಎಸ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು ಅಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರದಿಂದ ಪ್ರಸಿದ್ಧಿ ಪಡೆದರು. `ಮನೋರೂಪ' ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮ್ಮ ತಾಯಿಯ ಜೊತೆ ವಾಸವಾಗಿದ್ದಾರೆಪಿಯು ಮತ್ತು ಕಾಲೇಜು ಶಿಕ್ಷಣ ಮುಗಿಸಿದ್ದು ಮೂಡಬಿದಿರೆಯ ಆಳ್ವಾಸ್ ಸಂಸ್ಥೆಯಲ್ಲಿ. ನಂತರ ಮಂಗಳೂರಿನ SDM ಕಾಲೇಜಿನಲ್ಲಿ ಪದವಿ ಪಡೆದರು..

    ಪ್ರಿಯಾಂಕಾ ಅಪರೂಪದ ಪೋಟೋಗಳು : ಕ್ಲಿಕ್
    ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು : ಕ್ಲಿಕ್

    ಕನ್ನಡ ಕಿರುತೆರೆಯಲ್ಲಿ ಅಗ್ನಿ ಸಾಕ್ಷಿ ಧಾರಾವಾಹಿ ತುಂಬಾನೇ ಪ್ರಸಿದ್ಧ. ಇದರಲ್ಲಿನ ಪ್ರಮುಖ ಪಾತ್ರ ಚಂದ್ರಿಕಾ ಕೆಲವು ಕಾರಣಗಳಿಂದ ತೊರೆದಾಗ ಈ ಪಾತ್ರಕ್ಕೆ ಚಂದ್ರಿಕಾ ಬಂದರು. ಹಳೆ ಚಂದ್ರಿಕಾ ಪಾತ್ರಕ್ಕೆ ಇವರನ್ನು ಹೋಲಿಸಿ ಕೆಲವರು ಟ್ರೋಲ್ ಮಾಡಿದ್ದುಂಟು. ಆದರೆ ಕೆಲವು ದಿನಗಳಲ್ಲಿ ಇವರು ತಮ್ಮ ಅಭಿನಯದಿಂದ ಆ ಪಾತ್ರಕ್ಕಾಗಿ ಅಪಾರ ಮೆಚ್ಚುಗೆ ಪಡೆದರು.

    ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದರು. ಇವರನ್ನು ಬಿಗ್ ಬಾಸ್ ಮನೆಯೊಳೆಗೆ ಕಳುಹಿಸಿ ಕೊಡುವ ಕಾರ್ಯಕ್ರಮದಲ್ಲಿ ಅಗ್ನಿ ಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರಧಾರಿ ವೈಷ್ಣವಿ ನೃತ್ಯ ಪ್ರದರ್ಶನ ನೀಡಿದರು.ಸುಮಾರು 105 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿಯಿದ್ದು ಜನಮನ ಸೆಳೆದ ಪ್ರಿಯಾಂಕಾ, ಫಿನಾಲೆ ಹಿಂದಿನ ವಾರ ಹೊರಬಂದರು.

     

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X