X
ರಾಧಿಕಾ ಕುಮಾರಸ್ವಾಮಿ
Actress/Producer

ರಾಧಿಕಾ ಕುಮಾರಸ್ವಾಮಿ ಜೀವನ ಚರಿತ್ರೆ

ರಾಧಿಕಾ ಕುಮಾರಸ್ವಾಮಿ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ನಟಿ ಮತ್ತು ನಿರ್ಮಾಪಕಿ. ಇವರು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ವಿವಾಹವಾಗಿದ್ದಾರೆ.1986 ನವೆಂಬರ್ 1 ರಂದು ಮಂಗಳೂರಿನಲ್ಲಿ ಬಿಲ್ಲವ (ಪೂಜಾರಿ) ಕುಟುಂಬದಲ್ಲಿ ಜನಿಸಿದರು.

ವೈವಾಹಿಕ ಜೀವನ

ಹದಿನಾಲ್ಕನೇ ವಯಸ್ಸಿನಲ್ಲಿ ರತನ್ ಕುಮಾರ್ ಎಂಬುವವರ ಜೊತೆ ಕಟೀಲಿನ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬಾಲ್ಯ ವಿವಾಹವಾಯಿತು.ಇವರು 2002 ಆಗಸ್ಟ್‍ ನಲ್ಲಿ ಹೃದಯಾಘಾತದಿಂದ ನಿಧನರಾದರು. 2006 ರಲ್ಲಿ ಕುಮಾರಸ್ವಾಮಿಯವರೊಂದಿಗೆ ವಿವಾಹವಾದ ರಾಧಿಕಾರಿಗೆ ಶಮಿಕಾ ಎಂಬ ಪುತ್ರಿಯಿದ್ದಾಳೆ. 2010 ರಲ್ಲಿ ಈ ವಿಷಯವನ್ನು ಸಾರ್ವಜನಿಕಗೊಳಿಸಿದರು.


ಸಿನಿ ಕರಿಯರ್ 

2002 ರಲ್ಲಿ ತೆರೆಕಂಡ ನಿನಗಾಗಿ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದರು. ಆಗ ಕೇವಲ ಒಂಭತ್ತನೆಯ ತರಗತಿ ಓದುತ್ತಿದ್ದರು. ನಂತರ ತವರಿಗೆ ಬಾ ತಂಗಿ, ರಿಷಿ, ಮಂಡ್ಯ, ಅಟೋ ಶಂಕರ್ ,ಅಣ್ಣ ತಂಗಿ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದರು.

2007 ರಿಂದ ಚಿತ್ರರಂಗದ ಕೆಲಕಾಲ ಗ್ಯಾಪ್ ಪಡೆದ ಅವರು 2013 ರಲ್ಲಿ ತೆರೆಕಂಡ `ಸ್ವೀಟಿ ನನ್ನ ಜೋಡಿ' ಚಿತ್ರದಿಂದ ನಟಿಯಾಗಿ ಕಮ್ ಬ್ಯಾಕ್ ಮಾಡಿದರು. ಇದಕ್ಕೂ ಮುಂಚೆ ಯಶ್ ಮತ್ತು ರಮ್ಯಾ ಅಭಿನಯದ ಲಕ್ಕಿ ಚಿತ್ರವನ್ನು ನಿರ್ಮಾಣ ಮಾಡಿದ್ದ ರಾಧಿಕಾ ಈ ಚಿತ್ರವನ್ನು ಕೂಡ ಅವರೇ ನಿರ್ಮಾಣ ಮಾಡಿದರು.

ಪ್ರಸ್ತುತ ನಟಿಯಾಗಿ ಮತ್ತು ಶಮಿಕಾ ಎಂಟರ್‍ಪ್ರೈಸಸ್ ಮೂಲಕ ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+