ಕ್ರೇಜಸ್ಟಾರ್ ರವಿಚಂದ್ರನ್ ರವರ ಈಶ್ವರಿ ಪ್ರೊಡಕ್ಷನ್ಸ್ ನಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಆರಂಭಿಸಿದ ರಘುರಾಮ್ ನಂತರ ಪ್ರೇಮ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ರವರ ಬಳಿಯಲ್ಲಿ ಸಹಾಯಕರಾಗಿ ಅನುಭವ ಪಡೆದರು. `ದೋಣಿ ಸಾಗಲಿ' ಚಿತ್ರದಲ್ಲಿನ ಪಾತ್ರದಿಂದ ನಟನಾಗಿ ಸಿನಿಪಯಣ ಆರಂಭಿಸಿದ ಇವರು ನಂತರ ಜೋಗಿ, ಅಜಯ್, ಭೂಪತಿ, ಜೊತೆ ಜೊತೆಯಲಿ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಜೀ ಕನ್ನಡ, ಉದಯ ಟಿವಿ, ಈ ಟಿವಿ ವಾಹಿನಿಗಳಲ್ಲಿ ಸುಮಾರು 13 ವರ್ಷ ಕಾಲ ಕೆಲಸ ಮಾಡಿದರು.
ಶಿವಣ್ಣರ ಚೆಲುವೆಯೆ ನಿನ್ನ ನೋಡಲು ಚಿತ್ರದಿಂದ ನಿರ್ದೇಶಕರಾಗಿ ಕಾರ್ಯ ಆರಂಭಿಸಿದ ಇವರು ನಂತರ ಫೇರ್ ಆ್ಯಂಡ್ ಲವ್ಲೀ, ಮಿಸ್ಸಿಂಗ್ ಬಾಯ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.