ರಾಜನ್ ನಾಗೇಂದ್ರ ಜೀವನಚರಿತ್ರೆ

  ರಾಜನ್- ನಾಗೇಂದ್ರ ಕನ್ನಡ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕರು. ರಾಜನ್ ಮತ್ತು ನಾಗೇಂದ್ರ ಒಡಹುಟ್ಟಿದ ಸಹೋದರರು.ಇವರ ತಂದೆ ರಾಜಪ್ಪರವರು ಕನ್ನಡದ ಮೂಕಿ ಚಿತ್ರಗಳಲ್ಲಿ ಹಾರ್ಮೋನಿಯಂ ಹಿನ್ನಲೆ ಸಂಗೀತ ನೀಡುತ್ತಿದ್ದರು. ತಂದೆಯ ಮಾರ್ಗದರ್ಶನದಲ್ಲಿ ರಾಜನ್ ವಯಲಿನ್ ನಲ್ಲಿ ಪರಿಣಿತಿ ಪಡೆದರೆ ,ನಾಗೇಂದ್ರ ಜಲತರಂಗದಲ್ಲಿ ಪರಿಣಿತಿ ಪಡೆಯುತ್ತಾರೆ.

  ಸಂಗೀತ ಪಯಣ

  ಇಬ್ಬರು ಸಹೋದರರು `ಜಯ ಮಾರುತಿ' ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುತ್ತಿರುವಾಗ ಮದ್ರಾಸಲ್ಲಿನ ಪದ್ಮನಾಭ ಶಾಸ್ತ್ರಿಯವರ ಮಾರ್ಗದರ್ಶನದಲ್ಲಿ ಸಂಗೀತ ಕಲಿಯುವ ಅವಕಾಶ ದೊರಕುತ್ತದೆ.ನಂತರ ಬೆಂಗಳೂರಿಗೆ ಹಿಂತುರಿಗಿದ ಇರ್ವರಲ್ಲಿ ನಾಗೇಂದ್ರನಿಗೆ ಕಾಳಿಂಗರಾವ್ ಪರಿಚಯವಾಗುತ್ತದೆ.ಸ್ವಲ್ಪ ದಿನಗಳಲ್ಲಿಯೇ `ಶ್ರೀನಿವಾಸ ಕಲ್ಯಾಣ' ಚಿತ್ರದಲ್ಲಿ ಹಾಡುವ ಅವಕಾಶ ನಾಗೇಂದ್ರರಿಗೆ ದೊರೆಯುತ್ತದೆ.

  1952 ರಲ್ಲಿ ಸ್ವತಂತ್ರ ಸಂಗೀತ ನಿರ್ದೇಶಕರಾದ ಇವರು `ಸೌಭಾಗ್ಯ ಲಕ್ಷ್ಮಿ' ಚಿತ್ರಕ್ಕೆ ಸಂಗೀತ ನೀಡುತ್ತಾರೆ. ಈ ಚಿತ್ರದ ಯಶಸ್ಸಿನ ನಂತರ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ನಾಲ್ಕೂ ನೂರಕ್ಕಿಂತ ಹೆಚ್ಚು ಕನ್ನಡ,ತೆಲುಗು ,ತಮಿಳು,ಮಲಯಾಳಂ,ತುಳು ಮತ್ತು ಶ್ರೀಲಂಕಾದ ಸಿಂಹಳ ಭಾಷೆಯ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.

  ಪ್ರಸಿದ್ಢ ಚಿತ್ರಗಳು

  ನಾ ನಿನ್ನ ಮರೆಯಲಾರೆ, ಎರಡು ಕನಸು, ಹೊಂಬಿಸಿಲು ,ಬೆಂಕಿಯ ಬಲೆ ,ಚಂದನದ ಗೊಂಬೆ ,ಗಂಧಗ ಗುಡಿ ,ಬಯಲು ದಾರಿ ,ಗಿರಿ ಕನ್ಯೆ

  ಪ್ರಸಿದ್ಧ ಚಿತ್ರಗೀತೆಗಳು

  ಆಕಾಶ ದೀಪವು ನೀನು- (ಪವನ ಗಂಗಾ)

  ಭಾನಲ್ಲೂ ನೀನೆ ಭುವಿಯಲ್ಲೂ ನೀನೆ -(ಬಯಲು ದಾರಿ)

  ಬಿಸಿಲಾದರೇನು ಮಳೆಯಾದರೇನು - (ಬೆಂಕಿಯ ಬಲೆ)

  ಎಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ - (ನಾ ನಿನ್ನ ಮರೆಯಲಾರೆ)

  ಎಂದೆಂದು ನಿನ್ನನು ಮರೆತು -(ಎರಡು ಕನಸು)

  ಮಾಮರವೆಲ್ಲೋ ಕೋಗಿಲೆಯಲ್ಲೋ - (ದೇವರ ಗುಡಿ)

  ನಲಿವ ಗುಲಾಬಿ ಹೂವೇ - (ಅಟೋ ರಾಜಾ)

  ನಾವಾಡುವ ನುಡಿಯೇ ಕನ್ನಡ ನುಡಿ - (ಗಂಧದ ಗುಡಿ)

  ನೀರ ಬಿಟ್ಟು ನೆಲದ ಮೇಲೆ - (ಹೊಂಬಿಸಿಲು)

  ನೋಟದಾಗೆ ನಗೆಯ ಬೀರಿ - (ಪರಸಂಗದ ಗೆಂಡೆತಿಮ್ಮ)

  ಒಮ್ಮೆ ನಿನ್ನನ್ನು ಕಣ್ಣು ತುಂಬಿ ನೋಡುವಾಸೆ -(ಗಾಳಿ ಮಾತು)

  ಪ್ರೇಮ ಪ್ರೀತಿ ನನ್ನುಸಿರು- (ಸಿಂಗಾಪೂರದಲ್ಲಿ ರಾಜಾಕುಳ್ಳ)

  ತೈ ತೈ ಬಂಗಾರಿ - (ಗಿರಿಕನ್ಯೆ)

  ಯುಗ ಯುಗಗಳೇ ಸಾಗಲಿ - (ಹೃದಯಗೀತೆ)

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X