ರಮೇಶ್ ಇಂದಿರಾ ಕನ್ನಡ ಕಿರುತೆರೆಯ ಪ್ರಖ್ಯಾತ ನಿರ್ದೇಶಕ. ಜೊತೆಗೆ ನಟನಾಗಿ ಮತ್ತು ಲೇಖಕರಾಗಿ ಕೂಡ ಪ್ರಸ್ತುತರು. ಶೃತಿ ನಾಯ್ಡು ಚಿತ್ರ ಪ್ರೊಡಕ್ಷನ್ ಚಿತ್ರದ ಕ್ರಿಯೇಟಿವ್ ಹೆಡ್ ಆಗಿರುವ ಇವರು `ಮಹಾದೇವಿ' ಮುಂತಾದ ಸೀರಿಯಲ್‌ಗಳನ್ನು ನಿರ್ಮಿಸಿದ್ದಾರೆ. ನಿರ್ದೇಶಕರಾಗಿ ಮಹಾದೇವಿ, ದೇವಿ, ಅಮ್ನೋರು, ನಮ್ಮಮ್ಮ ಶಾರದೆ, ಯಾರೇ ನೀ ಮೋಹಿನಿ ಹಾಗೂ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಒಲವಿನ ನಿಲ್ದಾಣ ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದಾರೆ.
ಇವರು ಪ್ರೀಮಿಯರ್ ಪದ್ಮಿನಿ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟರು. ನಂತರ ನಟನೆಗೆ ಎಂಟ್ರಿಕೊಟ್ಟ ಇವರು, ಕೆಜಿಎಫ್ ಚಾಪ್ಟರ್ ೧ರಲ್ಲಿ ಸೂರ್ಯನಾರಾಯಣ ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಸದ್ಯ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ವಿಲನ್ ಪಾತ್ರದ ಮೂಲಕ ಸಿನಿರಸಿಕರ ಮನಗೆದ್ದಿದ್ದಾರೆ.