twitter

    ರೇಲಂಗಿ ನರಸಿಂಹ ರಾವ್ ಜೀವನಚರಿತ್ರೆ

    ರೇಲಂಗಿ ನರಸಿಂಹರಾವ್ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಚಿತ್ರ ನಿರ್ದೇಶಕರು. ತೆಲುಗು ಮಾತ್ರವಲ್ಲದೇ ಕೆಲ ತಮಿಳು ಮತ್ತು ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸುಮಾರು 70 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಇವರು ಕೆಲವು ಟೆಲಿವಿಷನ್ ಸೀರೀಸ್‌ಗಳನ್ನು ನಿರ್ದೇಶಿಸಿದ್ದಾರೆ.ಆಂಧ್ರಪ್ರದೇಶದ ಪಲಕೊಲ್ಲುವಿನಲ್ಲಿ ಜನಿಸಿದ ಇವರು ತೆಲುಗಿನ ಖ್ಯಾತ ಹಾಸ್ಯನಟ ಮತ್ತು ನಿರ್ಮಾಪಕ ರೇಲಂಗಿ ವೆಂಕಟರಾಮಯ್ಯನವರ ಸಂಬಂಧಿ.

    ಕನ್ನಡದಲ್ಲಿ ಶಶಿಕುಮಾರ್‌ರ `ಇಬ್ಬರು ಹೆಂಡಿರ ಮುದ್ದಿನ ಪೋಲಿಸ್' ಮತ್ತು `ಎದುರು ಮನೇಲಿ ಗಂಡ ಪಕ್ಕದ ಮನೇಲಿ ಪಕ್ಕದ ಮನೇಲಿ ಗಂಡ' ಚಿತ್ರಗಳನ್ನು ನಿರ್ದೇಶಿಸುವದರ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ `ಹೆಂಡ್ತಿ ಹೇಳಿದರೆ ಕೇಳಬೇಕು',`ಎನೋಂದ್ರೆ',`ಗೆಲುವಿನ ಸರದಾರ' ಚಿತ್ರಗಳನ್ನು ನಿರ್ದೇಶಿಸಿದರು. ನಂತರ ಶಿವರಾಜಕುಮಾರ್ ಅವರು ನಾಯಕ ನಟನಾಗಿ ನಟಿಸಿದ `ರಾಜಾ' ಮತ್ತು `ಇಬ್ಬರ ನಡುವೆ ಮುದ್ದಿನ ಆಟ' ಚಿತ್ರಗಳನ್ನು ನಿರ್ದೇಶಿಸಿದರು. ಒಟ್ಟಿನಲ್ಲಿ ರೇಲಂಗಿಯವರು ಕನ್ನಡದಲ್ಲಿ ಏಳು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X