ಸಂಗೀತಾ ಭಟ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. 1992 ಜುಲೈ 4 ರಂದು ಜನಿಸಿದರು. ಚಿತ್ರರಂಗಕ್ಕೂ ಬರುವ ಮುನ್ನ ಕಿರುತೆರೆಯಲ್ಲಿ ಕೂಡ ನಟಿಸಿದ್ದಾರೆ. ಪತಿ ಸುದರ್ಶನ್ ರಂಗಪ್ರಸಾದ್ ಸ್ಟಾಂಡ್ ಅಪ್ ಕಾಮಿಡಿಗಳಿಂದ ಪ್ರಸಿದ್ಧರಾಗಿದ್ದಾರೆ.
ಪಂಜರದ ಗಿಳಿ, ಭಾಗ್ಯವಂತರು, ಚಂದ್ರ ಚಕೋರಿ ಮುಂತಾದ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. 2014 ರಲ್ಲಿ ತೆರೆಕಂಡ ಪ್ರೀತಿ ಗೀತಿ ಇತ್ಯಾದಿ ಚಿತ್ರದ ಮೂಲಕ ನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ನಂತರ ಒಂದು ತೆಲುಗು ಮತ್ತು ತಮಿಳು ಚಿತ್ರದಲ್ಲಿ ನಟಿಸಿದರು. ಆದರೆ ಇವರಿಗೆ ಹೆಸರು ತಂದುಕೊಟ್ಟ ಚಿತ್ರ ಎರಡನೇ ಸಲ.
2018 ರಲ್ಲಿ ಮೀಟೂ ವಿವಾದ ಎದ್ದಾಗ ಕನ್ನಡ ಚಿತ್ರರಂಗದಲ್ಲಿ ತಮಗಾದ ಕಿರುಕುಳದ ಬಗ್ಗೆ ಸಂಗೀತಾ ಭಟ್ ಸಾರ್ವಜನಿಕವಾಗಿ ತಮಗಾದ ನೋವುಗಳನ್ನು ಹೇಳಿಕೊಂಡರು. ನಂತರ ಹಲವು ಕನ್ನಡ ನಟಿಯರು ತಮಗಾಗ ಮೀಟೂ ಮೊಮಂಟ್ ಗಳನ್ನು ಹಂಚಿಕೊಂಡರು.