ಬೇಬಿ ಶ್ಯಾಮಿಲಿ ಎಂದೇ ಖ್ಯಾತಿ ಪಡೆದಿರುವ ಶ್ಯಾಮಿಲಿ ಬಾಲು ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ. ಬಾಲ ಕಲಾವಿದೆಯಾಗಿ ರಾಷ್ಟ್ರ ಪ್ರಶಸ್ತಿ ಪಡೆದು ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಮಿಂಚಿದ್ದಾರೆ. ಇವರ ಸಹೋದರಿ ನಟಿ ಶಾಲಿನಿ ತಮಿಳಿನ ಖ್ಯಾತ ನಟ ಅಜಿತ್ ರನ್ನು ವಿವಾಹವಾಗಿದ್ದಾರೆ.
1997 ಜುಲೈ 10ರಂದು ಚೆನ್ನೈನಲ್ಲಿ ಜನಿಸಿದ ಶ್ಯಾಮಿಲಿ ಸಾಹಸಸಿಂಹ ವಿಷ್ಣುವರ್ಧನ್ ರ `ಮತ್ತೇ ಹಾಡಿತು ಕೋಗಿಲೆ' ಚಿತ್ರದಿಂದ ಕನ್ನಡದಲ್ಲಿ ಸಿನಿಪಯಣ ಆರಂಭಿಸಿದರು. ಮೂರು ವರ್ಷದ ಮುಗುವಿದ್ದಾಗ ಮಣಿರತ್ನಂ ರ ಅಂಜಲಿ ಎಂಬ ಚಿತ್ರದಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿ ಪಡೆದರು. ಬಾಲ ಕಲಾವಿದೆಯಾಗಿ ಸುಮಾರು 35 ಚಿತ್ರಗಳಲ್ಲಿ ನಟಿಸಿದ್ದಾರೆ. ನಂತರ 2009 ರಲ್ಲಿ ತೆರೆಕಂಡ ತೆಲಗು ಚಿತ್ರ `ಓಯ್' ದಿಂದ ನಾಯಕ ನಟಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು.