twitter
    Celebs»Shine Shetty»Biography

    ಶೈನ್ ಶೆಟ್ಟಿ ಜೀವನಚರಿತ್ರೆ

    ಶೈನ್ ಶೆಟ್ಟಿ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ಪ್ರತಿಭೆ. ಕುಂದಾಪುರದವರಾದ ಇವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ `ಲಕ್ಷ್ಮೀ ಬಾರಮ್ಮ' ಸೀರಿಯಲ್ ನಲ್ಲಿನ ಚಂದು ಪಾತ್ರದಿಂದ ತುಂಬಾ ಪ್ರಸಿದ್ಧಿ ಪಡೆದರು.

    ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು : ಕ್ಲಿಕ್
    ಶೈನ್ ಶೆಟ್ಟಿ ಅಪರೂಪದ ಪೋಟೊಗಳು:  ಕ್ಲಿಕ್

    ಪದವಿ ಓದುತ್ತಿದ್ದಾಗ ಉಡುಪಿಯ ಸ್ಥಳೀಯ ವಾಹಿನಿಯೊಂದರಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಅವಕಾಶ ಒದಗಿ ಬಂತು. ಎರಡು ವರ್ಷಗಳ ಕಾಲ ಸೀರಿಯಲ್‌ ನಲ್ಲಿ ನಟಿಸಿ ನಂತರ ಚಿತ್ರರಂಗದಲ್ಲಿ ನಾಯಕನಾಗಬೇಕೆಂದು ಸೀರಿಯಲ್ ತೊರೆದರು. ಸ್ವಲ್ಪ ದಿನ ಹಿಮಾಲಯಕ್ಕೆ ಹೋಗಿ ಬಂದರು. ಆದರೆ ಚಿತ್ರರಂಗದಲ್ಲಿ ನಿರೀಕ್ಷೆ ಹುಸಿಯಾಯಿತು. ಜೀವನ ಯಜ್ಞ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದರು. ಚಿತ್ರ ಯಶಸ್ವಿಯಾಗಲಿಲ್ಲ. ಅಷ್ಟೋತ್ತಿಗಾಗಲೇ ಸ್ವಲ್ಪ ಸಾಲ ಮಾಡಿಕೊಂಡಿದ್ದ ಶೈನ್ ಗೆ ಕಿರುತೆರೆ ಮರಳಿ ಕರೆಯಿತಾದರೂ ಹೋಗಲಿಲ್ಲ.

    ಒಂದು ದಿನ ತಳ್ಳೋ ಗಾಡಿಯಲ್ಲಿ ಊಟ ಮಾಡುತ್ತಿದ್ದಾಗ, ತಾವು ಒಂದು ಆ ತರ ಆಹಾರ ಗಾಡಿ ಮಾಡಬೇಕೆಂದು ಅಂದುಕೊಂಡು, ತಮ್ಮ ತಂದೆಯ ಸ್ನೇಹಿತರಿಂದ ಸಾಲ ಪಡೆದು `ಗಲ್ಲಿ ಕಿಚನ್' ಎಂಬ ಹೆಸರಿಟ್ಟು ಆಹಾರದ ಗಾಡಿಯೊಂದನ್ನು ಮಾಡುತ್ತಾರೆ. ಬೆಂಗಳೂರಿನ ಬನಶಂಕರಿಯಲ್ಲಿ ತಮ್ಮ ಗಾಡಿಯಲ್ಲಿ ಆಹಾರ ತಯಾರಿಸಿ ನೀಡುವ ಮೋಬೈಲ್ ಕ್ಯಾಂಟೀನ್ ತೆರೆದರು.

    ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X