ಶಿಶಿರ್ ಶಾಸ್ತ್ರಿ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟ. ಮೂಲತಃ ಹಾಸನದವರಾದ ಇವರು 1991ರ ಡಿಸೆಂಬರ್ 14ರಂದು ಜನಿಸಿದರು. ಇವರು ಅದ್ಭುತ ಭರತನಾಟ್ಯ ಕಲಾವಿದ ಕೂಡ ಹೌದು. 9ನೇ ವಯಸ್ಸಿನಲ್ಲಿ ಗೆಜ್ಜೆಕಟ್ಟಿ ಹೆಜ್ಜೆ ಹಾಕಿದ ಶಿಶಿರ್ ಸುಮಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ಮಾಡಿದ್ದಾರೆ.
ಕಿರುತೆರೆ ಪ್ರವೇಶ
ತಮ್ಮದೇಯಾದ ಈವೆಂಟ್ ಮ್ಯಾನೆಮಜ್‌ಮೆಂಟ್ ಕಂಪನಿಯನ್ನು ಹೊಂದಿದ್ದ ಶಿಶಿರ್ ಶಾಸ್ತ್ರಿ, ಆಕಸ್ಮಿಕವಾಗಿ ನಟನೆಗೆ ಪ್ರವೇಶ ಮಾಡಿದರು. ಶಶಿರ್ ಅವರನ್ನು ನೋಡಿದ ಒಬ್ಬರು ಇಲ್ಲಿ ಧಾರಾವಾಹಿಗೆ ಆಡಿಷನ್ ನಡೆಯುತ್ತಿದೆ ಎಂದರಂತೆ. ಈ ಸಂದರ್ಭ ನಾನ್ಯಾಕೆ ಒಮ್ಮೆ ಟ್ರೈ ಮಾಡಬಾರದು ಎಂದುಕೊಂಡ ಶಸಿರ್, ಆಡಿಷನ್ಗೆ ಹೋಗಿದ್ದಾರೆ. ಅದೃಷ್ಟ ಎಂಬಂತೆ ಧಾರಾವಾಹಿಯಲ್ಲಿ ನಟಿಸಲು ಆಯ್ಕೆಯಾಗಿದ್ದಾರೆ.
2012ರಲ್ಲಿ ಸೊಸೆ ತಂಡ ಸೌಭಾಗ್ಯ ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಇವರು, ನಂತರ ಪುಟ್ಟಗೌರಿ ಮದುವೆ, ಭಾರತಿ ಮತ್ತು ಕುಲವಧು ಧಾರಾವಾಹಿಗಳಲ್ಲಿ ನಟಿಸಿದರು. ಕುಲವಧು ಧಾರಾವಾಹಿ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತು. ಶಿಶಿರ್ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆನಂತರ ಸೇವಂತಿ ಪ್ರೇಮಲೋಕ ಸೇರಿದಂತೆ ಪರಭಾಷಾ ಸೀರಿಯಲ್‌ಗಳಲ್ಲೂ ಅಭಿನಯಿಸಿದ್ದಾರೆ.
ಸಿನಿಮಾ
ಮಿ.ಎಲ್‌ಎಲ್‌ಬಿ ಸಿನಿಮಾ ಮೂಲಕ ಬೆಳ್ಳಿತೆರೆ ಕಾಲಿಟ್ಟ ಶಿಶಿರ್ ಶಾಸ್ತ್ರಿ, ಆನಂತರ ಬಿಲ್ಗೇಟ್ಸ್ , ಅಲೆವ ಮೋಡ, ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬಿಗ್‌ಬಾಸ್: ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಸಿದ್ದ ಶಿಶಿರ್ ಶಾಸ್ತ್ರಿ ೧೧ನೇ ವಾರ ಎಲಿಮಿನೇಟ್ ಆದರು.