Celebs » Shiva Rajkumar » Biography
ಜೀವನಚರಿತ್ರೆ

ಹ್ಯಾಟ್ರಿಕ್ ಹೀರೋ ಎಂದೇ ಖ್ಯಾತಿ ಗಳಿಸಿರುವ ಡಾ.ಶಿವರಾಜ್ ಕುಮಾರ್ ಇವರು ದು 12 ಜುಲೈ 1962 ವರನಟ ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ದಂಪತಿಗಳ ಮಗನಾಗಿ ಗಾಜನೂರುನಲ್ಲಿ ಜನಿಸಿದರು. ಇವರು ವಿದ್ಯಾಭ್ಯಾಸವನ್ನು ಟಿ. ನಗರ ಚನ್ನೈ ನಲ್ಲಿ ಪೂರ್ಣಗೊಳಿಸಿದ್ದಾರೆ.

1983 ರಲ್ಲಿ ಇವರು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಇವರು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರಿ ಗೀತಾ ಅವರನ್ನು ವಿವಾಹವಾಗಿದ್ದಾರೆ. ಶಿವರಾಜ್ ಕುಮಾರ್ ಹಾಗೂ ಗೀತಾ ದಂಪತಿಗಳಿಗೆ ನಿವೇದಿತಾ ಮತ್ತು ನಿರುಪಮ ಎಂಬ ಇಬ್ಬರು ಮಕ್ಕಳಿದ್ದಾರೆ.

1986 ರಲ್ಲಿ ಬಿಡುಗಡೆಗೊಂಡ ಆನಂದ್ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿದರು. ಇವರು ನಟಿಸಿರುವ ಮೊದಲ ಮೂರೂ ಚಿತ್ರಗಳು ಯಶಸ್ಸು ಕಂಡಿದ್ದರಿಂದ 'ಹ್ಯಾಟ್ರಿಕ್ ಹೀರೋ' ಎಂಬ ಬಿರುದು ಇವರಿಗೆ ನೀಡಲಾಯಿತು. ಇವರು ಕೇವಲ ನಟಿಸುವುದು ಅಷ್ಟೇ ಅಲ್ಲದೆ ಅತ್ಯುತ್ತಮ ನೃತ್ಯಗಾರರು ಕೂಡ.

2014 ರಲ್ಲಿ ಹರ್ಷ ಅವರ ನಿರ್ದೇಶನದಲ್ಲಿ ಬಿಡುಗಡೆಗೊಂಡ ಭಜರಂಗಿ ಚಿತ್ರವೂ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿತು. ಈ ಚಿತ್ರವು ಕರ್ನಾಟಕದಾದ್ಯಂತ 212 ಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಂಡು 100 ದಿವಸ ಚಿತ್ರರಂಗದಲ್ಲಿ ಪ್ರದರ್ಶನಗೊಂಡು ಅಧಿಕ ಲಾಭವನ್ನು ಗಳಿಸಿ ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಿತು.

ಇವರೆಗೂ ಇವರು 28 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮದೆ ಛಾಪು ಮೂಡಿಸಿರುವ ಶಿವಣ್ಣ ಅವರಿಗೆ ಕನ್ನಡ ಹಾಟ್ರಿಕ್ ಹೀರೋ,, ಸೆಂಚುರಿ ಸ್ಟಾರ್, ಎಂದು ಕರೆಲಾಗುತ್ತಿದೆ.

ರಾಜ್ಯ ಪ್ರಶಸ್ತಿಗಳು:-

* ಓಂ- 1995 - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ

* ಹೃದಯ ಹೃದಯ - 1999 - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ

* ಚಿಗುರಿದ ಕನಸು - 2003 - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ

* ಜೋಗಿ - 2006 - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ.

ಫಿಲ್ಮ್ ಫೇರ್ ಪ್ರಶಸ್ತಿಗಳು :-

* ಓಂ-1995

* ನಮ್ಮೂರ ಮಂದಾರ ಹೂವೆ - 1996

* ಎ.ಕೆ.47 - 1999

* ತಮಸ್ಸು - 2011

* ಜೋಗಿ - 2005

 

 

 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada