ಗುಬ್ಬಿ ವೀರಣ್ಣ ನಾಟಕ ಕಂಪನಿಯಿಂದ ನಟನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಶಿವರಾಮ್, ಕೆ.ಆರ್.ಸೀತಾರಾಮ್ ಶಾಸ್ತ್ರೀರವರ ಬಳಿಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇರಿಕೊಂಡರು. 1965 ರಲ್ಲಿ ತೆರೆಕಂಡ `ಬೆರತ ಜೀವ' ಚಿತ್ರದಿಂದ ಸಿನಿ ಜೀವನ ಆರಂಭಿಸಿದ ನಂತರ ಸುಮಾರು ಆರು ದಶಕಗಳ ಕಾಲ ಕನ್ನಡದಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ.
2021 ಡಿಸೆಂಬರ್ 4 ರಂದು ಮನೆಯಲ್ಲಿ ಜಾರಬಿದ್ದು, ಮೆದುಳಿನ ರಕ್ತಸ್ರಾವದಿಂದ ನಿಧನರಾದರು.