ಶೃತಿ ಕನ್ನಡ ಚಿತ್ರರಂಗದ ಜನಪ್ರಿಯ ನಟಿ. 1975ರ ಸೆಪ್ಟಂಬರ್ 18ರಂದು ಜನಿಸಿದ ಇವರ ಮೂಲ ಹೆಸರು ಗಿರಿಜಾ. ದ್ವಾರಕೀಶ್ ಅವರು ಅವರಿಗೆ 'ಶೃತಿ' ಅಂತ ಹೆಸರಿಟ್ಟು 'ಶ್ರುತಿ' ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.
ಸಿನಿಮಾರಂಗ
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ 'ಆಸೆಗೊಬ್ಬ ಮೀಸೆಗೊಬ್ಬ' ಸಿನಿಮಾದಲ್ಲಿ ಫೋಷಕ ಪಾತ್ರದಲ್ಲಿ ನಟಿಸುವ ಮೂಲಕ ಶೃತಿ ಕನ್ನಡ ಚಿತ್ರಿರಂಗ ಪ್ರವೇಶಿಸಿದರು. ಆನಂತರ ದ್ವಾರಕೀಶ್ ನಿರ್ದೇಶನದ 'ಶ್ರುತಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು.
ಆನಂತರ ತಾಯಿ ಇಲ್ಲದ ತವರು, ವೀರಪ್ಪ ನಾಯಕ, ಗೌರಿ ಗಣೇಶ, ಬೊಂಬಾಟ್ ಹೆಂಡ್ತಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಣ್ಣಹಚ್ಚಿದ ಇವರು, ಕನ್ನಡ ಸೇರಿದಂತೆ ತಮಿಳು, ಮಲಯಾಳಂ, ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ತಾವು ನಟಿಸಿರುವ ಹಲವು ಸಿನಿಮಾಗಳಿಗೆ ಸಾಕಷ್ಟು ಪ್ರಶಸ್ತಿ ಬಾಚಿಕೊಂಡಿದ್ದಾರೆ.
ಬಿಗ್‌ಬಾಸ್
ಕಿಚ್ಚ ಸುದೀಪ್ ನಿರೂಪಣೆಯ ಬಿಗ್‌ಬಾಸ್ ಕನ್ನಡ ಸೀಸನ್ 3ರಲ್ಲಿ ಭಾಗವಹಿಸಿದ್ದ ಶ್ರುತಿ, ವಿಜೇತರಾಗಿದ್ದರು. ಸದ್ಯ ಸಿನಿಮಾಗಳಲ್ಲಿ ಫೋಷಕ ಪಾತ್ರಗಳಲ್ಲಿ ನಟಿಸುವ ಜೊತೆಗೆ ರಿಯಾಲಿಟಿ ಶೋನ ತೀರ್ಪುಗಾರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. .