twitter
    Celebs»Shubha Poonja»Biography

    ಶುಭ ಪೂಂಜಾ ಜೀವನಚರಿತ್ರೆ

    ಶುಭಾ ಪೂಂಜಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ಮಾಡೆಲ್. ಮಂಗಳೂರಿನ ತುಳುವ ಕುಟುಂಬದಲ್ಲಿ ಜನಿಸಿದ ಶುಭಾ ಬೆಳೆದಿದ್ದು ಬೆಂಗಳೂರಿನಲ್ಲಿ. ಜಯನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಇವರು ಮಾಡೆಲಿಂಗ್ ಮಾಡತೊಡಗಿದರು. ನಂತರ ಹಲವು ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. 2003ರಲ್ಲಿ `ಮಿಸ್ ಚೆನ್ನೈ ಟಾಪ್ ಮಾಡೆಲ್' ಟೈಟಲ್‌ಗೆ ಭಾಜನರಾದರು. ಇದೇ ಕಾರಣದಿಂದ 2004ರಲ್ಲಿ ತೆರೆಕಂಡ `ಮಚಿ' ಚಿತ್ರದಿಂದ ತಮಿಳು ಚಿತ್ರರಂಗ ಪ್ರವೇಶಿಸಿದರು.

    ಬಳಿಕ 2006ರಲ್ಲಿ ತೆರೆಕಂಡ ಜಾಕಪಾಟ್ ಚಿತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ತೆರೆಕಂಡ ಚಂಡ, ಮೊಗ್ಗಿನ ಮನಸ್ಸು ಚಿತ್ರಗಳ ಖ್ಯಾತಿ ತಂದು ಕೊಟ್ಟವು. ನಂತರ ಸ್ಲಮ್ ಬಾಲ, ಕಂಠೀರವ, ಜೈ ಮಾರುತಿ 800 ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.


    ಬಿಗ್‌ಬಾಸ್: ಕಿಚ್ಚ ಸುದೀಪ್ ನಿರೂಪಣೆಯ ಬಿಗ್‌ ಬಾಸ್ ಸೀಸನ್ 8ರಲ್ಲಿ ಶುಭಾ ಪೂಂಜಾ ಸ್ಪರ್ಧಿಯಾಗಿ ಭಾಗವಹಿಸಿದ್ದರು. 


    ಮುದುವೆ: ಶುಭಾ ಪೂಂಜಾ ಮಂಗಳೂರು ಮೂಲದ ಉದ್ಯಮಿ ಸುಮಂತ್ ಬಿಲ್ಲವ ಎಂಬುವವರನ್ನು 2020ರ ಡಿಸೆಂಬರ್  10ರಂದು ವಿವಾಹವಾದರು. ಇವರಿಬ್ಬರದ್ದು ಪ್ರೇಮ ವಿವಾಹ.


     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X