ಸುಮನ್ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕ ನಟ.. ಇವರು 80 ಮತ್ತು 90 ರ ದಶಕದಲ್ಲಿ ತೆಲಗು ಮತ್ತು ತಮಿಳು ಚಿತ್ರಗಳಲ್ಲಿ ರೋಮಾಂಟಿಕ್ ಹಿರೋ ಆಗಿ ಮಿಂಚಿದ್ದರು.
1959 ರಲ್ಲಿ ಆಂಧ್ರ ಪ್ರದೇಶದ ಬಿಲ್ಲವ ಕುಟುಂಬದಲ್ಲಿ ಜನಿಸಿದರು. ಇವರ ಮಾತೃಭಾಷೆ ತುಳು ಆದರೂ ತೆಲಗು,ತಮಿಳು,ಕನ್ನಡ ಮತ್ತು ಹಿಂದಿಯನ್ನು ಲೀಲಾಜಾಲವಾಗಿ ಮಾತನಾಡುತ್ತಾರೆ.
ಬಾಲ್ಯದ ವಿದ್ಯಭ್ಯಾಸ ಚೆನ್ನೈನಲ್ಲಿ ಮುಗಿಸಿ ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿ ಪಡೆದರು.ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುವ ಸುಮನ್ ಆಂಧ್ರಪ್ರದೇಶದ ಕರಾಟೆ ಅಸೋಸಿಯೇಶನ್‌ನ ಅಧ್ಯಕ್ಷರಾಗಿದ್ದಾರೆ.
1977 ರಲ್ಲಿ ತಮಿಳಿನ `ನೀಚಳ ಕುಲಂ' ಚಿತ್ರದಿಂದ ಸಿನಿಪಯಣ ಆರಂಭಿಸಿದರು.
ಕನ್ನಡ,ತಮಿಳು,ತೆಲಗು ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿರುವ ಸುಮನ್ ಇತ್ತೀಚಿಗೆ ಖಳನಾಯಕನ ಪಾತ್ರದಲ್ಲೂ ಮಿಂಚುತ್ತಿದ್ದಾರೆ.