ಸುಮಿತ್ರಾ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ. ಕನ್ನಡ,ತಮಿಳು,ತೆಲುಗು,ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಇವರು ಕೇರಳದ ತ್ರಿಸ್ಸೂರ್‌ನಲ್ಲಿ ಜನಿಸಿದರು. ತಂದೆ ರಾಘವ ನಾಯರ್ ,ತಾಯಿ ಜಾನಕಿ.
1974 ರಿಂದ 1986 ರವರೆಗೆ ನಾಯಕಿಯ ಪಾತ್ರಗಳಲ್ಲಿ ನಟಿಸಿದ ಸುಮಿತ್ರಾ ನಂತರ ಪೋಷಕ ಪಾತ್ರಗಳಿಗೆ ಜೀವ ತುಂಬಿದರು. ಬಾಲ್ಯದಲ್ಲಿಯೇ ಶಾಸ್ತ್ರೀಯ ನೃತ್ಯದಲ್ಲಿ ಪರಿಣಿತಿ ಪಡೆದಿದ್ದ ಇವರು 1972 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ ನೃತ್ಯಶಾಲಾ ಚಿತ್ರದಿಂದ ಸಿನಿಪಯಣ ಆರಂಭಿಸಿದರು.
ರಜನಿ,ಕಮಲ ಹಾಸನ್ ಮುಂತಾದ ನಟರೊಂದಿಗೆ ನಾಯಕಿಯಾಗಿ ಮತ್ತು ತಾಯಿ ಪಾತ್ರದಲ್ಲಿ ನಟಿಸಿದ್ದು ವಿಶೇಷ.1975 ರಲ್ಲಿ ತೆರೆಕಂಡ `ಮುಗಿಯದ ಕಥೆ' ಚಿತ್ರದಿಂದ ಕನ್ನಡಕ್ಕೆ ಬಂದರು.
ಕನ್ನಡದ ಬಹುತೇಕ ನಟರೊಂದಿಗೆ ತೆರೆ ಹಂಚಿಕೊಂಡ ಸುಮಿತ್ರಾರವರು ಕನ್ನಡದ ಖ್ಯಾತ ನಿರ್ದೇಶಕ ಡಿ.ರಾಜೇಂದ್ರ ಬಾಬುರವರನ್ನು ವಿವಾಹವಾದರು. ಇವರು ಪುತ್ರಿ ಉಮಾಶಂಕರಿ ಮತ್ತು ನಕ್ಷತ್ರ ಕೂಡ ನಟಿಯಾಗಿ ಸಕ್ರಿಯವಾಗಿದ್ದಾರೆ.