twitter
    Celebs»Sunil»Biography

    ಸುನೀಲ್ ಜೀವನಚರಿತ್ರೆ

    ಸುನೀಲ್ ಕನ್ನಡ ಚಿತ್ರರಂಗ ಕಂಡ ಸ್ಪುರದ್ರೂಪಿ ನಟ. ತಮ್ಮ ಚುರುಕು ಅಭಿನಯದಿಂದ ಕನ್ನಡದಲ್ಲಿ ಹೊಸ ಚುರುಕು ಮೂಡಿಸಿದ್ದ ಸುನೀಲ್ ಕೇವಲ ಮೂವತ್ತನೇ ವಯಸ್ಸಿನಲ್ಲಿ ವಿಧಿವಶವಾಗಿದ್ದು ದುರಂತ.  ಸುನೀಲ್ ತೊಂಭತ್ತರ ದಶಕದ ಚಾಕಲೇಟ್ ಹೀರೋ ಎಂದೇ ಖ್ಯಾತಿ ಪಡೆದಿದ್ದರು.

    1964 ಎಪ್ರಿಲ್ 1 ರಂದು ಉಡುಪಿ ಹತ್ತಿರದ ಎಡತ್ತಡಿಯಲ್ಲಿ ಜನಿಸಿದರು. 1990 ರಿಂದ 1994 ರವರೆಗೆ ಸಿನಿರಂಗದಲ್ಲಿ ಸಕ್ರಿಯವಾಗಿದ್ದ ಸುನೀಲ್ ಸುಮಾರು ಮೂವತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಬೆಳ್ಳಿ ಕಾಲುಂಗುರ, ದ್ರಾಕ್ಷಾಯಿಣಿ, ಮಾಲಾಶ್ರೀ ಮಾಮಾಶ್ರೀ, ಶೃತಿ ಮುಂತಾದ ಹಿಟ್ ಚಿತ್ರಗಳ ಮೂಲಕ ಪ್ರಸಿದ್ಧರಾಗಿದ್ದರು. ಸಿನಿಪರದೆಯ ಮೇಲೆ ಸುನೀಲ್ ಮತ್ತು ಮಾಲಾಶ್ರೀ  ಆ ಕಾಲದ ಫೇವರೇಟ್ ಜೋಡಿಯಾಗಿತ್ತು.

    1994 ಜುಲೈ 24 ರಂದು ನಿರ್ಮಾಪಕ ಸಚಿನ್ ಮಲ್ಯ ಮತ್ತು ನಟಿ ಮಾಲಾಶ್ರೀಯವರೊಂದಿಗೆ ಬಾಗಲಕೋಟೆಯಿಂದ ಬೆಂಗಳೂರಿಗೆ ಕಾರಿನಲ್ಲಿ ಬರುವಾಗ ಎದುರಿಗೆ ಬರುವ ಟ್ರಕ್ ಕಾರಿಗೆ ಗುದ್ದಿತು. ಒಂದು ತಾಸಿನ ನಂತರ ಸುನೀಲ್ ಕೊನೆಯುಸಿರೆಳೆದರೆ, ಮಾಲಾಶ್ರೀಯವರು ಹಲವು ಗಾಯಗಳೊಂದಿಗೆ ಪವಾಡಸದೃಶವಾಗಿ ಉಳಿದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X