ಸುರೇಶ್ ಹೆಬ್ಳೀಕರ್ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಮತ್ತು ನಿರ್ಮಾಪಕ. ಇವರು ಪರಿಸರ ರಕ್ಷಣೆಯಲ್ಲಿ ಹಲವು ಕಾರ್ಯಕ್ರಮಗಳ ಮೂಲಕ ಮುಂಚೂಣಿಯಲ್ಲಿದ್ದಾರೆ.
1948 ರಲ್ಲಿ ಧಾರವಾಡದಲ್ಲಿ ಜನಿಸಿದ ಸುರೇಶ್ 1975 ರಲ್ಲಿ ತೆರೆಕಂಡ `ಕಂಕಣ' ಚಿತ್ರದ ಮೂಲಕ ನಟನಾಗಿ ಮುನ್ನೆಲೆಗೆ ಬಂದರು. ಇವರು ನಿರ್ದೇಶಿಸಿದ `ಕಾಡಿನ ಬೆಂಕಿ' ಚಿತ್ರಕ್ಕೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಲಭಿಸಿದೆ.
ಇವರು ನಿರ್ದೇಶಿಸಿದ `ಶೇಫರ್ಡ್ಸ್ ಆನ್ ದ ಮೂವ್' ಚಿತ್ರಕ್ಕೆ ಅಂತರಾಷ್ಟ್ರೀಯ ಒಸಿರಿಸ್ ಪ್ರಶಸ್ತಿ ಲಭಿಸಿದೆ.ತಾವು ನಿರ್ದೇಶಿಸಿದ ಬಹುತೇಕ ಚಿತ್ರಗಳಲ್ಲಿ ನಟರಾಗಿ ಅಭಿನಯಿಸಿದ್ದಾರೆ.