ತ್ರಿಷಾ ಕೃಷ್ಣನ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಪ್ರಮುಖವಾಗಿ ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು ಕನ್ನಡದಲ್ಲಿ ಪುನೀತ್ ರಾಜಕುಮಾರ್ ರ ಪವರ್ ಚಿತ್ರದಲ್ಲಿ ನಟಿಸಿದ್ದಾರೆ.
1983 ಮೇ 4 ರಂದು ಚೆನ್ನೈನಲ್ಲಿ ಜನಿಸದ ಇವರು ತಮ್ಮ ವಿಧ್ಯಾಭ್ಯಾಸವನ್ನೆಲ್ಲಾ ಅಲ್ಲಿಯೇ ಮುಗಿಸಿದರು. ತಂದೆ ಕೃಷ್ಣನ್ ಮತ್ತು ತಾಯಿ ಉಮಾ.
ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡ ತ್ರಿಷಾ 1999 ರಲ್ಲಿ ಮಿಸ್ ಮದ್ರಾಸ್ ಪ್ರಶಸ್ತಿಗೆ ಭಾಜನರಾದರು.
ನಂತರ ಅದೇ ವರ್ಷ ತೆರೆಕಂಡ ತಮಿಳು ಚಿತ್ರ ಜೋಡಿ ಮೂಲಕ ಸಿನಿಪಯಣ ಆರಂಭಿಸಿದರು. ನಂತರ ತಮಿಳಿನಲ್ಲಿ ಬಂದ ಗಿಲ್ಲಿ ,ಸಾಮಿ ಮತ್ತು ತೆಲುಗುವಿನಲ್ಲಿ ಬಂದ `ವರ್ಷಂ' ಚಿತ್ರ ಇವರಿಗೆ ನಾಯಕಿಯಾಗಿ ಮನ್ನಣೆ ತಂದುಕೊಟ್ಟವು.