ತುಲೀಪ್ ಜೋಷಿ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಕೆಲ ಕನ್ನಡ,ತೆಲುಗು,ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ.ಇವರ ತಂದೆ ಗುಜರಾತಿ ಹಿಂದು ಮತ್ತು ತಾಯಿ ಲೆಬನಾನ್ ದೇಶದ ಕ್ರೈಸ್ತ ಮಹಿಳೆ.ಇವರು ಮುಂಬೈನ ಮೀಥಿಬಾಯಿ ಕಾಲೇಜ್‌ನಿಂದ ಪದವಿ ಪಡೆದಿದ್ದಾರೆ.
2000 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಕಂಟೆಸ್ಟ್ ಸ್ಫರ್ಧೆಯಲ್ಲಿ ಭಾಗವಹಿಸಿದ ನಂತರ ಹಲವಾರು ಟಿವಿ ಜಾಹಿರಾತುಗಳಲ್ಲಿ ಕಾಣಿಸಿಕೊಂಡರು.
ಕನ್ನಡದಲ್ಲಿ ಇವರು `ಬಚ್ಚನ್',`ಸೂಪರ್' ಚಿತ್ರಗಳಲ್ಲಿ ನಟಿಸಿದ್ದಾರೆ.