ಉಮೇಶ್ ಬಣಕಾರ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ ಮತ್ತು ನಟ. ಬೆಂಗಳೂರಿನಲ್ಲಿ ನೆಲೆಸಿರುವ ಉಮೇಶ್ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಉಪಾದ್ಯಕ್ಷರಾಗಿಯೂ ಪರಿಚಿತರು.ಪ್ರಯೋಗಾತ್ಮಕ ಚಿತ್ರನಿರ್ಮಾಣಗಳಿಗೆ ಹೆಸರಾಗಿರುವ ಉಮೇಶ್ `ಹೇ ಸರಸು',`ಮತ್ತೊಂದ್ ಮದುವೆ',`ಲಿಮಿಟ್', `ಹಗ್ಗದ ಕೊನೆ' ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.
ಬಹಳ ವಿರಳವಾಗಿ ಚಿತ್ರದಲ್ಲಿ ಅಭಿನಯಿಸುವ ಉಮೇಶ್ `ಕೆಂಪಿರ್ವೆ',`ಬಹುಪರಾಕ್' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.