ಉಷಾ ಭಂಡಾರಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಇವರು ಆಪ್ (An actor prepares) ಎಂಬ ನಟನೆ ಹಾಗೂ ಪ್ರದರ್ಶನ ಕಲೆಗಳ ಶಿಕ್ಷಣ ಕೇಂದ್ರವನ್ನು ನೆಡೆಸುತ್ತಿದ್ದಾರೆ. 2013 ರಲ್ಲಿ ಬೆಂಗಳೂರಿನ ನಾಗರಭಾವಿಯಲ್ಲಿ ಪ್ರಾರಂಭವಾದ ಈ ಇನ್ಸ್ಟಿಟ್ಯೂಟ್‌ನಿಂದ ಹಲವಾರು ಪ್ರತಿಭೆಗಳು ಹೊರಬಂದಿವೆ.
`ಒಂದು ಮೊಟ್ಟೆಯ ಕಥೆ',`ಪುಟ್ಟಕ್ಕನ ಹೈವೆ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.