twitter
    Celebs»Vijaya Bhaskar»Biography

    ವಿಜಯ್ ಭಾಸ್ಕರ್ ಜೀವನಚರಿತ್ರೆ

    ವಿಜಯ ಭಾಸ್ಕರ್ ಕನ್ನಡ ಚಿತ್ರರಂಗದ ಧೀಮಂತ ಸಂಗೀತ ನಿರ್ದೇಶಕ. ಬೆಂಗಳೂರಿನಲ್ಲಿ ಜನಿಸಿದ ಇವರು ಬಾಲ್ಯದಲ್ಲಿಯೇ ಸಂಗೀತದ ಕಡೆಗೆ ಆಸಕ್ತಿಯನ್ನು ಹೊಂದಿದ್ದರು. ಓದಿದ್ದು ಮೆಕಾನಿಕಲ್ ಇಂಜಿನಿಯರಿಂಗ್ ಆದರೂ ವೃತ್ತಿಯಾಗಿ ತೆಗೆದುಕೊಂಡಿದ್ದು ಮಾತ್ರ ಸಂಗೀತ ಕ್ಷೇತ್ರವನ್ನು. ಬಾಲಿವುಡ್ ಚಿತ್ರರಂಗದ ದಿಗ್ಗಜ ಸಂಗೀತ ನಿರ್ದೇಶಕ ನೌಷದ್ ಅವರ ಸಹಾಯಕರಾಗಿ ಕೆಲಕಾಲ ಮುಂಬೈನಲ್ಲಿ ನೆಲಸಿ ಚಿತ್ರ ಸಂಗೀತ ನಿರ್ದೇಶನದ ಒಳಹೊರಗನ್ನು ಅರಿತರು. 

    ಡಾ.ರಾಜಕಮಾರ್ ಮತ್ತು ಪಂಡರಿಬಾಯಿ ಅಭಿನಯದ`ರಾಣಿ ಹೊನ್ನಮ್ಮ' ಚಿತ್ರ ಇವರಿಗೆ ಹೆಸರು ತಂದುಕೊಟ್ಟ ಚಿತ್ರ. ಪುಟ್ಟಣ್ಣ ಕಣಗಾಲ್ ಅವರ 18 ಚಿತ್ರಗಳಿಗೆ ಸಂಗೀತ ನೀಡಿದ್ದು ಇವರ ವಿಶೇಷ . ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಸಂಗೀತ ಆಧಾರಿತ ಚಿತ್ರ `ಮಲಯ ಮಾರುತ' ಚಿತ್ರಕ್ಕೆ `ಸುರ್ ಸಿಂಗಾರ್' ಗೌರವ ಪ್ರಾಪ್ತವಾಯಿತು. ಆರು ಭಾಷೆಗಳ ಸುಮಾರು 484 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. 

    ನಿರ್ದೇಶಕ ಲಕ್ಷಣರಾವ್ ರವರಿಗೆ ಗೀತಪ್ರಿಯ ಎಂದು ಹೆಸರು ಇಟ್ಟ ಶ್ರೇಯ ವಿಜಯಭಾಸ್ಕರ್ ಅವರಿಗೆ ಸಲ್ಲಬೇಕು. ಈ ಸಂಗೀತ ಕೋಗಿಲೆ 2002 ರಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X