X
ವಿಜಯಲಕ್ಷ್ಮಿ ಮಂಡ್ಯ
Actress

ವಿಜಯಲಕ್ಷ್ಮಿ ಮಂಡ್ಯ ಜೀವನ ಚರಿತ್ರೆ

ಚಿತ್ರರಂಗದಲ್ಲಿ ಮಂಡ್ಯ ಲಕ್ಷ್ಮಿ ಎಂದೇ ಗುರುತಿಸಿಕೊಂಡಿರುವ ವಿಜಯಲಕ್ಷ್ಮಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮೆಳವಳ್ಳಿ ಗ್ರಾಮದವರು. ಆಯುಷ್ಮಾನ್ ಭವ, ರಾಜೀವ್ ಸೇರಿದಂತೆ ಸುಮಾರು 15 ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಇವರು 19 ಏಜ್ ಇಸ್ ನಾನಸೆನ್ಸ್ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ಕೂಡ ನಟಿಸಿದ್ದಾರೆ. ಸಾಕು ತಂದೆ ಮಹದೇವಸ್ವಾಮಿ ಮತ್ತು ತಾಯಿ ಸವಿತಾರೊಂದಿಗೆ ಚನ್ನಪಟ್ಟಣದ ಬಸವೇಶ್ವರ ನಗರದಲ್ಲಿ ವಾಸವಾಗಿದ್ದರು.

 

2019 ಡಿಸೆಂಬರ್ ನಲ್ಲಿ ರಾಯಚೂರಿನಲ್ಲಿ ``ತುಂಗಭದ್ರಾ'' ಎಂಬ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಹತ್ತು ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡ ಇವರು ನಂತರ ಚಿತ್ರದ ಸಹ ನಿರ್ದೇಶಕ ಆಂಜನಪ್ಪ ಎಂಬುವವರ ಜೊತೆ ಮನೆ ಬಿಟ್ಟು ಹೋಗಿದ್ದರು. ಹದಿನೈದು ನಂತರ ಮತ್ತೆ ಮನೆಗೆ ಬಂದ ಇವರು ತಂದೆ ತಾಯಿಯ ಬಳಿ ಆಂಜನಪ್ಪನ ಜೊತೆ ಮತ್ತೆ ಓಡಾಡುವುದಿಲ್ಲ ಎಂದು ಕ್ಷಮೆ ಕೇಳಿದ್ದರು.

 

2020 ಜನೇವರಿ 3 ರಂದು ಮತ್ತೆ ಆಂಜನಪ್ಪನ ಜೊತೆ ಪರಾರಿಯಾದರು. ಲಕ್ಷ್ಮಿಯವರಿಗೆ ತಮ್ಮ ಚಿತ್ರದಲ್ಲಿ ನಟಿಸಲು ಮೊದಲೇ ಅಡ್ವಾನ್ಸ್ ಹಣ ನೀಡಿದ್ದ `ಜವಾರಿಲವ್' ,``ಪ್ರೊಡಕ್ಷನ್ಸ್ ನಂ 1'', ``ಪ್ರೇಮ ಮಹಲ್'' ಚಿತ್ರಗಳ ನಿರ್ಮಾಪಕರು ಮನೆಗೆ ಬಂದು ಹಣ ಮರಳಿ ನೀಡಲು ಫೋಷಕರಿಗೆ ಪೀಡಿಸತೊಡಗಿದರು. ಇದರಿಂದ ಮನನೊಂದ ತಾಯಿ ಸವಿತಾ ಮತ್ತು ಅಜ್ಜಿ ಚೆನ್ನಮ್ಮ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು. ಆತ್ಮಹತ್ಯೆ ಪ್ರಯತ್ನಕ್ಕೂ ಮುನ್ನ ತಮ್ಮ ಸಾವಿಗೆ ಆಂಜನಪ್ಪನೇ ಕಾರಣ ಎಂದು ವೀಡಿಯೋ ಮಾಡಿದ್ದರು, ಇಬ್ಬರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಸೇರಿಸಲಾಯಿತು. ಮಾರ್ಗಮಧ್ಯದಲ್ಲಿಯೇ ಅಜ್ಜಿ ಚೆನ್ನಮ್ಮ ಮೃತಪಟ್ಟರೆ, ತಾಯಿ ಸವಿತಾ ಆಸ್ಪತ್ರೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+