Celebs»Yagna Shetty»Biography

  ಯಜ್ಞ ಶೆಟ್ಟಿ ಜೀವನಚರಿತ್ರೆ

  ಕರ್ನಾಟಕದ ಕುದರೆಮುಖದಲ್ಲಿ ಜನಿಸಿದ ಯಜ್ಞಾ ಶೆಟ್ಟಿ ಕನ್ನಡ ಚಿತ್ರರಂಗದ ಪ್ರತಿಭಾನಿತ್ವ ನಟಿ. ಮಣಿಪಾಲ್ ಯುನಿವರ್ಸಿಟಿಯಲ್ಲಿ MBA ಮುಗಿಸಿದ ಇವರು 2007 ರಲ್ಲಿ `ಒಂದು ಪ್ರೀತಿಯ ಕಥೆ' ಚಿತ್ರದಿಂದ ಚಂದನವನದಲ್ಲಿ ಪ್ರಯಾಣ ಆರಂಭ ಮಾಡಿದರು. ನಂತರ ತೆರೆಕಂಡ `ಎದ್ದೇಳು ಮಂಜುನಾಥ' ಚಿತ್ರದಲ್ಲಿನ ಅಭಿನಯಕ್ಕಾಗಿ `ಫಿಲ್ಮ್ ಫೇರ್ ವಿಶೇಷ ಪ್ರಶಸ್ತಿ' ಪಡೆದರು. `ಲವ್ ಗುರು',`ಕಳ್ಳ ಮಳ್ಳ ಸುಳ್ಳ'`ಉಳಿದವರು ಕಂಡಂತೆ' ಮುಂತಾದ ಚಿತ್ರಗಳಿಂದ ಹೆಸರು ಮಾಡಿದ ಯಜ್ಞಾ ರಾಮ್ ಗೋಪಾಲ್ ವರ್ಮಾ ನಿರ್ದೇಶನದ `ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ವೀರಪ್ಪನ್ ಪತ್ನಿ ಮುತ್ತುಲಕ್ಷಿ ಪಾತ್ರದಲ್ಲಿ ನಟಿಸಿ ಪ್ರಶಂಸೆಗೆ ಪಾತ್ರರಾದರು. ಡಾ.ಬಿ.ಆರ್.ಅಂಬೇಡಕರ ಅವರ ಮೊದಲ ಪತ್ನಿ ರಮಾಬಾಯಿ ಜೀವನಾಧಾರಿತ ಚಿತ್ರ`ರಮಾಬಾಯಿ'ಯಲ್ಲಿ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ.

  2016 ರಲ್ಲಿ ಕಿಚ್ಚ ಸುದೀಪ್ ನಿರ್ಮಾಣದ ಹೆಣ್ಣು ಶಿಶುಹತ್ಯೆ ವಿರುದ್ದ ಹೋರಾಟದ ಕಥಾನಕ ಹೊಂದಿರುವ ಕಿರುತೆರೆ ಧಾರಾವಾಹಿ `ವಾರಸ್ದಾರ'ದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X