twitter
    Celebs»Yamuna Srinidhi»Biography

    ಯಮುನಾ ಶ್ರೀನಿಧಿ ಜೀವನಚರಿತ್ರೆ

    ಯಮುನಾ ಶ್ರೀನಿಧಿ ಭಾರತ ಮತ್ತು ಅಮೇರಿಕಾದಲ್ಲಿ ತಮ್ಮ ವಿಭಿನ್ನ ಶಾಸ್ರೀಯ ನೃತ್ಯಗಳಿಂದ ಪ್ರಸಿದ್ಧಿ ಪಡೆದಿರುವ ಭಾರತೀಯ ನೃತ್ಯ ಪಟು ಮತ್ತು ಹವ್ಯಾಸಿ ನಟಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಇಂಡೋ- ಅಮೇರಿಕನ್ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿರುವ ಇವರನ್ನು ಅಮೇರಿಕಾದ ಸರ್ಜಲ್ಯಾಂಡ್ ಮೇಯರ್ ಭಾರತೀಯ ಸಾಂಸ್ಕೃತಿಕ ರಾಯಭಾರಿ ಎಂದೂ ಕರೆಯುವುದು ಸಮಂಜಸವೇ ಸರಿ. ಇವರು ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಪುರಸ್ಕೃತರು .

    15 ವರ್ಷ ಅಮೇರಿಕಾದಲ್ಲಿ ಭರತನಾಟ್ಯ ಕಲಾವಿದೆಯಾಗಿ,ನೃತ್ಯ ಸಂಯೋಜಕಿಯಾಗಿ ಸಕ್ರಿಯವಾಗಿದ್ದ ಯಮುನಾರವರು 2012 ರಿಂದ ಭಾರತವನ್ನೇ ತಮ್ಮ ಮನೆಯನ್ನು ಮಾಡಿಕೊಂಡು  ಈಗಲೂ `ಸ್ಕೈಪ್' ಮುಖಾಂತರ ತಮ್ಮ ಅಮೇರಿಕಾದ ಶಿಷ್ಯರಿಗೆ ತರಬೇತಿ ನೀಡುತ್ತಿದ್ದಾರೆ. ಭಾರತದಲ್ಲಿಯೂ ಅನೇಕ ಗ್ರಾಮೀಣ ಪ್ರದೇಶಗಳ ಪ್ರತಿಭೆಗಳಿಗೆ ಸ್ವಯಂಪ್ರೇರಿತವಾಗಿ ತರಬೇತಿ ನೀಡುಬಯಸುವ ಇವರ ತುಡಿತ ಪ್ರಶಂಸನೀಯ.

    ಸಿನಿಪಯಣ

    ತಮ್ಮ ಬಿಡುವಿನ ವೇಳೆಯಲ್ಲಿ ನಟನೆಯಲ್ಲಿ ಭಾಗವಹಿಸುವ ಇವರು ಹಲವಾರು ಧಾರಾವಾಹಿ ನಿರ್ಮಾತೃಗಳ ಮೆಚ್ಚಿನ ಆಯ್ಕೆ. `ಅಶ್ವಿನಿ ನಕ್ಷತ್ರ',`ಅಮೃತ ವರ್ಷಿಣಿ' ಮುಂತಾದ ಸೀರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ.

    ಹವ್ಯಾಸಿ ಕಲಾವಿದೆ ಯಮುನಾ ಹಿರಿತೆರೆಯಲ್ಲಿ ಕೂಡ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. `ಮೇ 1st', ` ಟೈಗರ್ ಗಲ್ಲಿ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

    ಇವರ ಮೆಚ್ಚಿನ ನುಡಿ

    ``Art should not be the privilege of the few who can afford it''

    ``ಕಲೆ, ಉಳ್ಳವರು ಮಾತ್ರ ಹೊಂದುವ ಸವಲತ್ತಾಗಬಾರದು"

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X