X
ಹೋಮ್ » ಸೆಲಬ್ರಿಟಿಗಳು » ಯಮುನಾ ಶ್ರೀನಿಧಿ
ಯಮುನಾ ಶ್ರೀನಿಧಿ

ಯಮುನಾ ಶ್ರೀನಿಧಿ

Actress/Actor
ಜೀವನ ಚರಿತ್ರೆ :  ಯಮುನಾ ಶ್ರೀನಿಧಿ ಕನ್ನಡ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಜೊತೆಗೆ ಭಾರತ ಮತ್ತು ಅಮೆರಿಕಾದಲ್ಲಿ ತಮ್ಮ ವಿಭಿನ್ನ ಶಾಸ್ರೀಯ ನೃತ್ಯಗಳಿಂದ ಪ್ರಸಿದ್ಧಿ ಪಡೆದಿರುವ ಭಾರತೀಯ ನೃತ್ಯಪಟು. ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಇಂಡೋ-ಅಮೆರಿಕನ್ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿರುವ ಇವರನ್ನು ಅಮೆರಿಕಾದ ಸರ್ಜಲ್ಯಾಂಡ್ ಮೇಯರ್ ಭಾರತೀಯ ಸಾಂಸ್ಕೃತಿಕ ರಾಯಭಾರಿ ಎಂದೂ ಕರೆಯುವುದು ಸಮಂಜಸವೇ ಸರಿ. ಇವರು ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಪುರಸ್ಕೃತರು ಕೂಡ ಹೌದು.  15 ವರ್ಷ ಅಮೆರಿಕಾದಲ್ಲಿ ಭರತನಾಟ್ಯ ಕಲಾವಿದೆಯಾಗಿ, ನೃತ್ಯ ಸಂಯೋಜಕಿಯಾಗಿ ಸಕ್ರಿಯವಾಗಿದ್ದ ಯಮುನಾ ಅವರು,  2012ರಿಂದ ಭಾರತವನ್ನೇ ತಮ್ಮ ಮನೆಯನ್ನು ಮಾಡಿಕೊಂಡು ಈಗಲೂ `ಸ್ಕೈಪ್' ಮುಖಾಂತರ ತಮ್ಮ ಅಮೆರಿಕಾದ ಶಿಷ್ಯರಿಗೆ ತರಬೇತಿ ನೀಡುತ್ತಿದ್ದಾರೆ. ಭಾರತದಲ್ಲಿಯೂ ಅನೇಕ ಗ್ರಾಮೀಣ ಪ್ರದೇಶಗಳ ಪ್ರತಿಭೆಗಳಿಗೆ ಸ್ವಯಂಪ್ರೇರಿತವಾಗಿ ತರಬೇತಿ ನೀಡುಬಯಸುವ ಇವರ ತುಡಿತ ಪ್ರಶಂಸನೀಯ. ಸಿನಿಪಯಣ 2013ರಲ್ಲಿ ಪ್ರಸಾರವಾದ ಅಶ್ವನಿ ನಕ್ಷತ್ರ ಧಾರಾವಾಹಿ ಮೂಲಕ ಯುಮನಾ ಶ್ರೀನಿಧಿ ನಟನಾ ವೃತ್ತಿಗೆ ಕಾಲಿಟ್ಟರು. ಮುಂದೆ ಅಮೃತವರ್ಷಿಣಿ, ಕಮಲಿ, ಕನ್ಯಾಕುಮಾರಿ, ಮನಸಾರೆ ಸೇರಿದಂತೆ ಸುಮಾರು 14ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಪರಭಾಷೆ ಸಿನಿಮಾ ಮತ್ತು ಸೀರಿಯಲ್‌ಗಳಲ್ಲೂ ಕೆಲಸ ಮಾಡಿದ್ದಾರೆ.  ಕನ್ನಡ ಧಾರಾವಾಹಿ ಮಾತ್ರವಲ್ಲದೇ ಶಿವಲಿಂಗ, ಜಾಗ್ವಾರ್, ಯುವರತ್ನ, ರಾಧಾ ರಮಣ, ಗಲ್ಲಿ ಬೇಕರಿ, ಮೇ-1st, 3 ಘಂಟೆ 30 ದಿನ 30 ಸೆಕೆಂಡ್, ರಾಂಧವ, ಮಿಸ್ಸಿಂಗ್ ಬಾಯ್, ಸೆಪ್ಟೆಂಬರ್ 13, ಲವ್ 360, ವೆಡ್ಡಿಂಗ್ ಗಿಫ್ಟ್ ಸೇರಿದಂತೆ 45ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.  ಬಿಗ್‌ಬಾಸ್: ಯಮುನಾ ಶ್ರೀನಿಧಿ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ  2ನೇ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದರು. ಆದರೆ, ಮೊದಲ ವಾರವೇ ಎಲಿಮಿನೇಟ್ ಆದರು.  
ಮುಂದೆ ಓದಿ

ಯಮುನಾ ಶ್ರೀನಿಧಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actress
ಜಿ ಶ್ರೀನಿವಾಸ್ ರಾಮನಗರ 14 Mar 2025
ಶಾಂಡಿಲ್ಯ 19 Jan 2024
ಎಂ ಎನ್ ಶ್ರೀಕಾಂತ್ 02 Jun 2023
as Actress
ಶಶಾಂಕ್ 19 Aug 2022

ಯಮುನಾ ಶ್ರೀನಿಧಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಯಮುನಾ ಶ್ರೀನಿಧಿ

ಹೆಸರು ಯಮುನಾ ಶ್ರೀನಿಧಿ
ಹುಟ್ಟಿದ ದಿನ 09 May
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಯಮುನಾ ಶ್ರೀನಿಧಿ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+