For Quick Alerts
  ALLOW NOTIFICATIONS  
  For Daily Alerts

  ಶಾರುಖ್‌ಗಿಂತ 2 ವರ್ಷ ಮುನ್ನವೇ ದೀಪಿಕಾಗೆ ಆಫರ್ ಕೊಟ್ಟಿದ್ದ ಸಲ್ಮಾನ್: ಡಿಪ್ಪಿ ಒಪ್ಪಿಲಿಲ್ಲ ಯಾಕೆ?

  |

  ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆಗೆ ನವೆಂಬರ್ 9 ವಿಶೇಷ ದಿನ. ಈ ದಿನವನ್ನು ದೀಪಿಕಾ ಎಂದಿಗೂ ಮರೆಯೋ ಹಾಗೇ ಇಲ್ಲ. ಯಾಕಂದ್ರೆ, 'ಓಂ ಶಾಂತಿ ಓಂ' ಸಿನಿಮಾ ಮೂಲಕ ಬಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ದಿನವಿದು.

  ಗುಳಿಕೆನ್ನೆಯ ಚೆಲುವೆ ದೀಪಿಕಾ ಪಡುಕೋಣೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಇಂದಿಗೆ 15 ವರ್ಷಗಳಾಗಿವೆ. ಮೊದಲ ಸಿನಿಮಾದಲ್ಲೇ ಯಶಸ್ಸಿನ ರುಚಿ ಕಂಡ ನಟಿ ಮತ್ತೆಂದೂ ಹಿಂತಿರುಗಿ ನೋಡುವ ಗೋಜಿಗೆ ಹೋಗಲಿಲ್ಲ. 'ಚಾಂದನಿ ಚೌಕ್‌ ಟು ಚೈನಾ', 'ಕಾಲಿಂಗ್ ಕಾರ್ತಿಕ್', ಸೇರಿದಂತೆ ಕೆಲವು ಸಿನಿಮಾಗಳು ಹೀನಾಯವಾಗಿ ಸೋತಿದ್ದೂ ಇದೆ. ಆದರೆ, ಶಾರುಖ್ ಖಾನ್ ಸಿನಿಮಾ 'ಓಂ ಶಾಂತಿ ಓಂ' ಸ್ಟ್ರಾಂಗ್ ಎಂಟ್ರಿ ಕೊಟ್ಟಿದ್ದರು.

  KGF ಎದುರು ಸೋತಿದ್ದ ಶಾರುಖ್: 4 ವರ್ಷಗಳ ನಂತರ 'ಬದುಕೇ ಇದ್ದೀನಿ' ಎಂದು ಬಂದ 'ಪಠಾಣ್'!KGF ಎದುರು ಸೋತಿದ್ದ ಶಾರುಖ್: 4 ವರ್ಷಗಳ ನಂತರ 'ಬದುಕೇ ಇದ್ದೀನಿ' ಎಂದು ಬಂದ 'ಪಠಾಣ್'!

  ದೀಪಿಕಾ ಪಡುಕೋಣೆ ಮೊದಲ ಸಿನಿಮಾ 'ಓಂ ಶಾಂತಿ ಓಂ'. ಸೂಪರ್‌ಸ್ಟಾರ್ ಶಾರುಖ್ ಖಾನ್ ಈಕೆ ಮೊದಲ ಬಾಲಿವುಡ್ ಹೀರೊ. ಆದರೆ, ಶಾರುಖ್ ಖಾನ್‌ಗಿಂತ ಮೊದಲು ಸಲ್ಮಾನ್ ಖಾನ್ ಸಿನಿಮಾದಲ್ಲಿ ದೀಪಿಕಾ ನಟಿಸಬೇಕಿತ್ತು. ಈ ವಿಷಯವನ್ನು ಸ್ವತ: ದೀಪಿಕಾ ಪಡುಕೋಣೆ ಸಂದರ್ಶನವೊಂದರಲ್ಲಿ ಪ್ರಸ್ತಾಪಿಸಿದ್ದರು.

  ಸಲ್ಮಾನ್ ಜೊತೆ ಎಂಟ್ರಿ ಕೊಡ್ಬೇಕಿತ್ತು ದೀಪಿಕಾ!

  ಸಲ್ಮಾನ್ ಜೊತೆ ಎಂಟ್ರಿ ಕೊಡ್ಬೇಕಿತ್ತು ದೀಪಿಕಾ!

  ದೀಪಿಕಾ ಪಡುಕೋಣೆ 15 ವರ್ಷ ಪೂರೈಸಿರೋ ಹಿನ್ನೆಲೆ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಶಾರುಖ್ ಖಾನ್ ಸೇರಿದಂತೆ ಬಾಲಿವುಡ್‌ ದಿಗ್ಗಜರೊಂದಿಗೆ ನಟಿಸಿ ಗೆದ್ದಿದ್ದಾರೆ. ಸದ್ಯ ದೀಪಿಕಾ ಬಾಲಿವುಡ್‌ನ ಸ್ಟಾರ್ ನಟಿಯರ ಪಟ್ಟಿಯಲ್ಲಿ ದೀಪಿಕಾ ಹೆಸರಿದೆ. ಆದರೆ, ದೀಪಿಕಾ ಪಡುಕೋಣೆ ಸೂಪರ್ ಸಕ್ಸಸ್ ಎಂಟ್ರಿ ಕೊಟ್ಟಿದ್ದು ಎಲ್ಲರಿಗೂ ಗೊತ್ತಿದೆ. ಆದರೆ, ಶಾರುಖ್ ಖಾನ್‌ಗಿಂತ ಮುನ್ನ ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸಬೇಕಿತ್ತು ಅಂತ ಸ್ವತ: ದೀಪಿಕಾ ಹೇಳಿಕೊಂಡಿದ್ದಾರೆ.

  ದೀಪಿಕಾ ಪಡುಕೋಣೆ ಹೇಳಿದ್ದೇನು?

  ದೀಪಿಕಾ ಪಡುಕೋಣೆ ಹೇಳಿದ್ದೇನು?

  'ಓಂ ಶಾಂತಿ ಓಂ' ಸಿನಿಮಾ ಶುರುವಾಗುವುದಕ್ಕೂ 2 ವರ್ಷಕ್ಕೂ ಮುನ್ನ ಸಲ್ಮಾನ್ ಖಾನ್ ತಮ್ಮ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಂಡಿದ್ದರು ಎಂದು ದೀಪಿಕಾ ಸಂದರ್ಶನವೊಂದರಲ್ಲಿ ಹೇಳಿದ್ದರು. " ನಾನು ತುಂಬಾನೇ ಚಿಕ್ಕವಳಿದ್ದೆ. ಆಗಲೇ ಸಲ್ಮಾನ್ ಖಾನ್ ತಮ್ಮ ಸಿನಿಮಾದಲ್ಲಿ ನಟಿಸುವಂತೆ ನನಗೆ ಆಫರ್ ಕೊಟ್ಟಿದ್ದರು. ಆದರೆ, ಆ ವೇಳೆ ನಾನು ಕ್ಯಾಮರಾ ಮುಂದೆ ಬರಲು ರೆಡಿಯಿರಲಿಲ್ಲ. ಈ ವಿಷಯಕ್ಕಾಗಿ ನಾನು ಯಾವಾಗಲೂ ಆಭಾರಿಯಾಗಿರುತ್ತೇನೆ. ಅವರು ನನಗೆ ಆಫರ್ ಕೊಟ್ಟಿದ್ದೇ ಗ್ರೇಟ್." ಎಂದು ಹೇಳಿದ್ದಾರೆ.

  ದೀಪಿಕಾ-ಸಲ್ಮಾನ್ ಒಟ್ಟಿಗೆ ನಟಿಸಲೇ ಇಲ್ಲ

  ದೀಪಿಕಾ-ಸಲ್ಮಾನ್ ಒಟ್ಟಿಗೆ ನಟಿಸಲೇ ಇಲ್ಲ

  ಅಂದಿನಿಂದ ಸಲ್ಮಾನ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಕಾಂಬಿನೇಷನ್‌ನಲ್ಲಿ ಒಂದೇ ಒಂದು ಸಿನಿಮಾ ಬಂದಿಲ್ಲ. ಬಾಲಿವುಡ್‌ಗೆ ಎಂಟ್ರಿ ಕೊಟ್ಟು 15 ವರ್ಷಗಳಾಗಿದ್ದರೂ, ಈ ಜೋಡಿ ಒಟ್ಟಿಗೆ ಒಂದೇ ಒಂದು ಸಿನಿಮಾದಲ್ಲಿ ನಟಿಸಿಲ್ಲ. " ನಾವಿಬ್ಬರೂ ಒಟ್ಟಿಗೆ ನಟಿಸುವುದಕ್ಕೆ ತುಂಬಾನೇ ಸಮಯ ತೆಗೆದುಕೊಳ್ಳುತ್ತಿದೆ. ನನಗೆ ಅನಿಸುತ್ತೆ ನಮಗಾಗಿ ವಿಶೇಷವಾದದ್ದೇನೋ ಕಾದಿದೆ" ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.

  ದೀಪಿಕಾ ಪಡುಕೋಣೆ ಫುಲ್ ಬ್ಯುಸಿ

  ದೀಪಿಕಾ ಪಡುಕೋಣೆ ಫುಲ್ ಬ್ಯುಸಿ

  ದೀಪಿಕಾ ಇದೂವರೆಗೂ ಶಾರುಖ್ ಖಾನ್ ಜೊತೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಓಂ ಶಾಂತಿ ಓಂ', 'ಹ್ಯಾಪಿ ನ್ಯೂ ಇಯರ್', 'ಚೆನ್ನೈ ಎಕ್ಸ್‌ಪ್ರೆಸ್' ಈಗ 'ಪಠಾಣ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಶಾರುಖ್ ಖಾನ್ ನಟಿಸುತ್ತಿರುವ 'ಜವಾನ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಜೊತೆ 'ಪ್ರಾಜೆಕ್ಟ್ ಕೆ'ನಲ್ಲೂ ನಟಿಸುತ್ತಿದ್ದಾರೆ.

  English summary
  Deepika Padukone Could Have Made Bollywood Debut With Salman Khan Not Shah Rukh Khan, Know More.
  Wednesday, November 9, 2022, 17:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X