twitter
    For Quick Alerts
    ALLOW NOTIFICATIONS  
    For Daily Alerts

    ಭಾರತದ ಪೋರ್ನ್ ಮಾರುಕಟ್ಟೆ ಎಷ್ಟು ದೊಡ್ಡದು? ಪೋರ್ನ್ ಸೈಟ್‌ಗಳು ಹಣ ಹೇಗೆ ಗಳಿಸುತ್ತವೆ?

    By ಫಿಲ್ಮಿಬೀಟ್ ಡೆಸ್ಕ್
    |

    ಅಶ್ಲೀಲ ವಿಡಿಯೋ ನಿರ್ಮಾಣ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ ಬಂಧನವಾದ ಹಿನ್ನೆಲೆಯಲ್ಲಿಯೇ ಭಾರತದಲ್ಲಿ ಪೋರ್ನ್ ಮಾರುಕಟ್ಟೆ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ರಾಜ್ ಕುಂದ್ರಾ ಅಂಥ ದೊಡ್ಡ ಉದ್ಯಮಿಯೇ ಅಶ್ಲೀಲ ವಿಡಿಯೋ ನಿರ್ಮಾಣದಲ್ಲಿ ತೊಡಗಿದ್ದಾರೆಂದರೆ ಅದರಿಂದ ಬರುವ ಲಾಭ ಎಷ್ಟಿರಬಹುದು, ಉದ್ಯಮದ ವ್ಯಾಪ್ತಿ ಎಷ್ಟು, ಗ್ರಾಹಕರು ಎಷ್ಟಿದ್ದಾರೆ ಇಂಥಹಾ ಕುತೂಹಲದ ಪ್ರಶ್ನೆಗಳು ಹುಟ್ಟಿಕೊಂಡಿವೆ.

    ಮೊದಲಿಗೆ ತಿಳಿದುಕೊಳ್ಳಬೇಕಾದುದ್ದೆಂದರೆ ಭಾರತದಲ್ಲಿ ಪೋರ್ನೋಗ್ರಫಿ ಅಂದರೆ ಲೈಂಗಿಕತೆಯ ವಿಡಿಯೋ ನಿರ್ಮಾಣ ಮಾಡುವುದು, ಮಾರಾಟ ಮಾಡುವುದು ಸಂಪೂರ್ಣ ನಿಷಿದ್ಧ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಹಾಗಿದ್ದರೂ ಸಹ ಭಾರತದಲ್ಲಿ ಅಶ್ಲೀಲ ವಿಡಿಯೋಗಳ, ಅಶ್ಲೀಲ ಚಿತ್ರಗಳ ನಿರ್ಮಾಣ, ರಚನೆ ಆಗುತ್ತಿದೆ ಅದರ ಮಾರಾಟವೂ ಆಗುತ್ತಿದೆ. ಆದರೆ ವಯಸ್ಕ ವ್ಯಕ್ತಿ ಪೋರ್ನ್ ಅನ್ನು ಖಾಸಗಿಯಾಗಿ ನೋಡುವುದು ಅಪರಾಧವಲ್ಲ.

    ಭಾರತದಲ್ಲಿ ಪೋರ್ನ್‌ಗೆ ಭಾರಿ ದೊಡ್ಡ ಮಾರುಕಟ್ಟೆ ಇದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಪೋರ್ನ್ ವಿಡಿಯೋ ನೋಡುವ ಮೂರನೇ ರಾಷ್ಟ್ರ ಭಾರತ. ಅದರಲ್ಲಿಯೂ ಕೊರೊನಾ ನಂತರ ಭಾರತದಲ್ಲಿ ಪೋರ್ನ್ ವಿಡಿಯೋ ನೋಡುವವರ ಸಂಖ್ಯೆ ಬಹುತೇಕ ದುಪ್ಪಟ್ಟಾಗಿದೆ. ಭಾರತದಲ್ಲಿ ಪೋರ್ನ್ ವೀಕ್ಷಣೆಯ ಅಂಕಿ ಅಂಶಗಳು ಇಂತಿವೆ.

    ಭಾರತದಲ್ಲಿ ಪೋರ್ನ್ ನೋಡುವವರ ಸಂಖ್ಯೆ ಹೆಚ್ಚಳ

    ಭಾರತದಲ್ಲಿ ಪೋರ್ನ್ ನೋಡುವವರ ಸಂಖ್ಯೆ ಹೆಚ್ಚಳ

    ಅತಿ ಹೆಚ್ಚು ಪೋರ್ನ್ ವೀಕ್ಷಿಸುವ ದೇಶಗಳಲ್ಲಿ ಅಮೆರಿಕ, ಬ್ರಿಟನ್ ನಂತರದ ಸ್ಥಾನದಲ್ಲಿದೆ ಭಾರತ. ಭಾರತದಲ್ಲಿ ಪೋರ್ನ್ ವೀಕ್ಷಿಸುವ ಸರಾಸರಿ ಸಮಯ 9 ನಿಮಿಷ 30 ಸೆಕೆಂಡ್. ಈ ಕೊರೊನಾ ಸಮಯದಲ್ಲಿ ಭಾರತದಲ್ಲಿ ಪೋರ್ನ್ ವೀಕ್ಷಣೆ 95% ಹೆಚ್ಚಾಗಿದೆ. ಪೋರ್ನ್‌ಹಬ್ ಬಿಡುಗಡೆ ಮಾಡಿರುವ ವರದಿ ಪ್ರಕಾರ ಭಾರತದಲ್ಲಿ ಮೊಬೈಲ್‌ನಲ್ಲಿ ಪೋರ್ನ್ ವೀಕ್ಷಣೆ ಮಾಡುವವರ ಸಂಖ್ಯೆ ಭಾರಿ ಹೆಚ್ಚಳವಾಗಿದೆ ಮತ್ತು ಪೋರ್ನ್ ವೀಕ್ಷಿಸುವ ಮಹಿಳೆಯರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಭಾರತದಲ್ಲಿ 18-24 ವಯಸ್ಸಿನವರು 44% ಜನ ಪೋರ್ನ್ ವೀಕ್ಷಿಸುತ್ತಾರೆ. 25-34ರ ಒಳಗಿರುವ 41% ಮಂದಿ, 35-44 ವಯಸ್ಸಿನ 6% ಮಂದಿ ಪೋರ್ನ್ ವೀಕ್ಷಿಸುತ್ತಾರೆ. ಭಾರತದಲ್ಲಿ ಪೋರ್ನ್ ಹಬ್‌ ವೆಬ್‌ಸೈಟ್ ವೀಕ್ಷಿಸುವ ಒಟ್ಟು ಜನರಲ್ಲಿ 30% ಮಹಿಳೆಯರಿದ್ದಾರೆ.

    7000 ಕೋಟಿಗೂ ದೊಡ್ಡ ಮೌಲ್ಯದ ಉದ್ಯಮವಿದು

    7000 ಕೋಟಿಗೂ ದೊಡ್ಡ ಮೌಲ್ಯದ ಉದ್ಯಮವಿದು

    ವಿಶ್ವದಾದ್ಯಂತ ಸುಮಾರು 2.50 ಕೋಟಿಗೂ ಹೆಚ್ಚು ಪೋರ್ನ್ ವೆಬ್‌ಸೈಟ್‌ಗಳಿವೆ. ಜಗತ್ತಿನಲ್ಲಿರುವ ಎಲ್ಲ ವೆಬ್‌ಸೈಟ್‌ಗಳನ್ನು ಲೆಕ್ಕ ಹಿಡಿದರೆ ಅದರಲ್ಲಿ 12% ಪೋರ್ನ್‌ ವೆಬ್‌ಸೈಟ್‌ಗಳೇ ಇವೆ. ವಿಶ್ವದಾದ್ಯಂತ ಇಂಟರ್ನೆಟ್‌ ತಡಕಾಡಲು ಬಳಕೆಯಾಗುವ ಒಟ್ಟು ಡಾಟಾದ 30% ಪೋರ್ನ್ ನೋಡಲು ಬಳಕೆಯಾಗುತ್ತಿದೆ. 2019ರ ಮಾಹಿತಿಯಂತೆ ಪ್ರತಿ ವರ್ಷ 11,000 ಕ್ಕೂ ಹೆಚ್ಚು ಪೋರ್ನ್ ವಿಡಿಯೋಗಳು ನಿರ್ಮಾಣವಾಗುತ್ತಿವೆ. ಈಗ ಸಂಖ್ಯೆ ಇನ್ನೂ ಹೆಚ್ಚಾಗಿದೆ. ವಿಶ್ವದಲ್ಲಿ ಪೋರ್ನ್ ಎಂಬುದು 7000 ಕೋಟಿಗೂ ದೊಡ್ಡ ಉದ್ಯಮ. ವಿಶ್ವದ ಟಾಪ್ ಕಾರ್ಪೊರೇಟ್‌ ಸಂಸ್ಥೆಗಳಿಗಿಂತಲೂ ದೊಡ್ಡದು ಪೋರ್ನ್ ಉದ್ಯಮ! ಅಂತರ್ಜಾಲದಲ್ಲಿ ಈಗ ಲಭ್ಯವಿರುವ ಪೋರ್ನ್ ವಿಡಿಯೋಗಳಲ್ಲಿ ಬಹಪಾಲು ವಿಡಿಯೋಗಳು ಚಿತ್ರೀಕರಣವಾಗಿರುವುದು ಅಥವಾ ಅಪ್‌ಲೋಡ್ ಆಗಿರುವುದು ಕ್ಯಾಲಿಫೊರ್ನಿಯಾದ ಸ್ಯಾನ್ ಫರ್ನ್ಯಾಂಡೊ ವ್ಯಾಲಿಯಿಂದ. ಪೋರ್ನ್ ವಿಡಿಯೋಗಳಿಗೆ ಈ ನಗರ ವಿಶ್ವದಲ್ಲೇ ಜನಪ್ರಿಯ.

    ಮೂಲ ಸ್ಥಾನ ಮುಂಬೈ

    ಮೂಲ ಸ್ಥಾನ ಮುಂಬೈ

    ಭಾರತದಲ್ಲಿ ಪೋರ್ನೋಗ್ರಫಿ ಮೇಲೆ ನಿಷೇಧವಿದ್ದರೂ ಪೋರ್ನ್ ಸಿನಿಮಾಗಳ ನಿರ್ಮಾಣ ಅವ್ಯಾಹತವಾಗಿ ಸಾಗಿದೆ. ಭಾರತದಲ್ಲಿ ತಯಾರಾಗುವ ಬಹುತೇಕ ಪೋರ್ನ್ ವಿಡಿಯೋಗಳಿಗೆ ಮೂಲ ಸ್ಥಾನ ಮುಂಬೈ. ನಗರದ ಹೊರ ವಲಯದಲ್ಲಿ ಅಪಾರ್ಟ್‌ಮೆಂಟ್‌ಗಳನ್ನು, ಮನೆಗಳನ್ನು ಬಾಡಿಗೆಗೆ, ಲೀಸ್‌ಗೆ ಪಡೆದು ಅಲ್ಲಿ ಪೋರ್ನ್ ವಿಡಿಯೋ ಶೂಟ್ ಮಾಡಲಾಗುತ್ತದೆ. ಸಿನಿಮಾಗಳಲ್ಲಿ ಕ್ಯಾಮೆರಾಮನ್, ನಿರ್ದೇಶಕರಿಗೆ ಸಹಾಯಕರಾಗಿ ದುಡಿದವರದ್ದೇ ಈ ಪೋರ್ನ್ ವಿಡಿಯೋ ನಿರ್ಮಾಣ ಕಾರ್ಯದಲ್ಲಿ ಮುಖ್ಯ ಪಾತ್ರ. ಸಿನಿಮಾದಲ್ಲಿ ನಟಿಸುವ ಆಸೆ ಹೊತ್ತು ಬರುವ ಹೊಸ ನಟ-ನಟಿಯರು ಪೋರ್ನ್‌ ವಿಡಿಯೋಗಳ ನಟ-ನಟಿಯರು. ರಾಜ್ ಕುಂದ್ರಾ ಬಂಧನದ ಬಳಿಕ ಪೋರ್ನ್ ವಿಡಿಯೋ ನಿರ್ಮಾಣದ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆಯಾದರೂ ಈ ಹಿಂದೆಯೂ ಅನೇಕ ಬಾರಿ ಇಂಥ ಪ್ರಕರಣಗಳು ಬೆಳಕಿಗೆ ಬಂದಿವೆ, ಬಂಧನಗಳೂ ಆಗಿವೆ.

    ಮೀರಟ್‌ ನಗರದಲ್ಲಿ ಪೋರ್ನ್ ನಿರ್ಮಾಣ ಅವ್ಯಾಹತ

    ಮೀರಟ್‌ ನಗರದಲ್ಲಿ ಪೋರ್ನ್ ನಿರ್ಮಾಣ ಅವ್ಯಾಹತ

    ಇತ್ತೀಚಿನ ಕೆಲ ವರ್ಷಗಳಲ್ಲಿ ಉತ್ತರ ಪ್ರದೇಶದ ಮೀರತ್ ನಗರ ಭಾರತದ ಪೋರ್ನ್ ವಿಡಿಯೋ ನಿರ್ಮಾಣದ ಹಬ್ ಆಗಿ ಮಾರ್ಪಟ್ಟಿದೆ. ಮೀರಟ್‌ ಒಂದರಲ್ಲಿಯೇ ಸುಮಾರು 20ಕ್ಕೂ ಹೆಚ್ಚು ಗುಂಪುಗಳು ಪೋರ್ನ್ ವಿಡಿಯೋ ನಿರ್ಮಾಣದಲ್ಲಿ ತೊಡಗಿದ್ದಾವೆಂದು 2020ರಲ್ಲಿ ಮುಖ್ಯ ಸುದ್ದಿಸಂಸ್ಥೆಯೊಂದು ವರದಿ ಮಾಡಿತ್ತು. ಪಾರ್ನ್ ಹಬ್ ಹಾಗೂ ಇತರೆ ವೃತ್ತಿಪರ ಪೋರ್ನ್ ವೆಬ್‌ಸೈಟ್‌ಗಳು ಪ್ರಕಟಿಸುವ ವಿಡಿಯೋಗಳನ್ನು ನೋಡಿ ಅದೇ ಕತೆ, ಅದೇ ರೀತಿಯ ನಾಟಕೀಯತೆ ಬಳಸಿ ಸ್ಥಳೀಯ ನಟ-ನಟಿಯರಿಂದ ಅದನ್ನೇ ರೀಕ್ರಿಯೇಟ್ ಮಾಡುತ್ತಿದ್ದರು ಮೀರತ್‌ನ ಗ್ಯಾಂಗ್. 'ಸೇಲ್ಸ್‌ ಮ್ಯಾನ್', 'ಕಾಲ್ ಸೆಂಟರ್ ಗರ್ಲ್', 'ಪಡೋಸಿ ಆಂಟಿ', 'ಕ್ಲಾಸ್‌ ಮೇಟ್‌ ಕೆ ಸಾಥ್ ಟ್ಯೂಷನ್' ಇಂಥಹುವೇ ಕತೆಗಳನ್ನು ಆ ವಿಡಿಯೋಗಳು ಹೊಂದಿರುತ್ತಿದ್ದವು. ಕಡಿಮೆ ಬೆಲೆಯ ಡಿಎಸ್‌ಎಲ್‌ಆರ್ ಕ್ಯಾಮೆರಾ, ಮಾಮೂಲಿ ಬೆಳಕು ಬಳಸಿ ಹೋಟೆಲ್‌ ರೂಮ್‌ಗಳಲ್ಲಿ, ಮನೆಗಳಲ್ಲಿಯೇ ವಿಡಿಯೋ ಚಿತ್ರೀಕರಣ ಮಾಡಿ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್ ಮಾಡಲಾಗುತ್ತಿತ್ತು. ಕೊರೊನಾ ನಂತರ ಇದೇ ವಿಡಿಯೋಗಳು ಆಪ್‌ಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು.

    ಭಾರತದಲ್ಲಿ ಜನಪ್ರಿಯವಾಗಿರುವ ಆಪ್‌ಗಳು

    ಭಾರತದಲ್ಲಿ ಜನಪ್ರಿಯವಾಗಿರುವ ಆಪ್‌ಗಳು

    ಭಾರತದಲ್ಲಿ ಊಲು, ಕೋಕು, ಹಾಟ್‌ಶಾಟ್ಸ್, ಪ್ರೈಮ್‌ಫ್ಲಿಕ್ಸ್, ಗುಪ್‌ಚಪ್, ಫ್ಲಿಜ್‌ಮೋವ್, ನಿಯೋಫ್ಲಿಕ್ಸ್, ರೆಡ್‌ವ್ಯಾಪ್‌ ಟು ಇನ್ನಿತರೆ ಆಪ್‌/ವೆಬ್‌ಸೈಟ್‌ಗಳು ಬಹಳ ಖ್ಯಾತಿ ಹೊಂದಿವೆ. ಭಾರತದಲ್ಲಿ ನಿರ್ಮಾಣಗೊಂಡ ಬಹುತೇಕ ಪೋರ್ನ್ ವಿಡಿಯೋಗಳು, ಸಿನಿಮಾಗಳನ್ನು ಈ ಆಪ್‌ಗಳ ಮೂಲಕ ಬಿತ್ತರಿಸಲಾಗುತ್ತದೆ. ಒಂದೊಂದು ಆಪ್‌/ ವೆಬ್‌ಸೈಟ್‌ಗಳಲ್ಲಿಯೂ ಲಕ್ಷಾಂತರ ಮಂದಿ ಚಂದಾದಾರಿದ್ದಾರೆ. ಒಂದೊಂದು ಆಪ್‌ನಲ್ಲಿ ಒಂದೊಂದು ರೀತಿಯ ಶುಲ್ಕವಿದೆ. ಕೆಲವುದರಲ್ಲಿ ತಿಂಗಳು, ಕೆಲವುದರಲ್ಲಿ ವಿಡಿಯೋಕ್ಕೆ ಇಂತಿಷ್ಟೆಂದು ಹಣ ಹೀಗೆ. ಕೆಲವು ಆಪ್‌ಗಳಂತೂ ರೆಕಾರ್ಡೆಡ್‌ ವಿಡಿಯೋ ನೀಡುವ ಜೊತೆಗೆ ಲೈವ್ ವಿಡಿಯೋ ಸಹ ನೀಡುತ್ತವೆ. ಲೈವ್ ವಿಡಿಯೋ ನೋಡಲು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಇಂಥ ಆಪ್‌ಗಳಲ್ಲಿ ಪ್ರದರ್ಶಿತಗೊಳ್ಳುವ ಬಹುತೇಕ ಪೋರ್ನ್ ವಿಡಿಯೋಗಳು ಮೀರಟ್‌ನಲ್ಲಿ ಚಿತ್ರೀಕರಣವಾದವಂಥಹುವೇ. ಹಾಟ್‌ಶಾಟ್ಸ್‌ನಂತ ಆಪ್‌ಗಳಿಗೆ ಅಪ್‌ಲೋಡ್‌ ಆಗುವ ವಿಡಿಯೋಗಳು ಮುಂಬೈನ ಐಶಾರಾಮಿ ಸೆಟ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿರುತ್ತದೆ.

    ಮೊಬೈಲ್‌ ಸಂಸ್ಥೆಗಳ ಲಾಭದ ಕಣಜ ಪೋರ್ನ್‌

    ಮೊಬೈಲ್‌ ಸಂಸ್ಥೆಗಳ ಲಾಭದ ಕಣಜ ಪೋರ್ನ್‌

    ಪೋರ್ನೋಗ್ರಫಿ ಎನ್ನುವುದು ವಿಶ್ವದಲ್ಲಿ ಕೋಟ್ಯಂತರ ಮೌಲ್ಯದ ಉದ್ಯಮ. ಭಾರತದಲ್ಲಿಯಂತೂ ಪೋರ್ನ್ ಕಂಟೆಂಟ್‌ಗೆ ಭಾರಿ ಬೇಡಿಕೆ ಇದೆ. ಮೊಬೈಲ್ ಡಾಟಾ ಸಂಸ್ಥೆಗಳು ತಮ್ಮ ಲಾಭದ ಬಹುಪಾಲು ಹಣವನ್ನು ಗಳಿಸುವುದು ಪೋರ್ನ್‌ ವಿಡಿಯೋಗಳಿಂದ! ಗೂಗಲ್, ಯಾಹೂಗಳಿಗೂ ಇವು ದೊಡ್ಡ ಲಾಭವನ್ನೇ ತಂದುಕೊಡುತ್ತವೆ. ಸ್ಮಾರ್ಟ್‌ಫೋನ್‌ಗಳು ಹೆಚ್ಚಾದ ಬಳಿಕ ಆಪ್‌ ಮೂಲಕ ಪೋರ್ನ್‌ ಅನ್ನು ಖಾಸಗಿಯಾಗಿ ನೀಡುವ ಪದ್ಧತಿ ಆರಂಭವಾಗಿದೆ. ಮಾಸಿಕ, ವಾರ್ಷಿಕ ಶುಲ್ಕ ನಿಗದಿ ಮಾಡಲಾಗುತ್ತದೆ. ಇದರಿಂದ ಬಹಳ ದೊಡ್ಡ ಮಟ್ಟದ ಲಾಭ ಪೋರ್ನ್ ವಿಡಿಯೋ ನಿರ್ಮಾಪಕರಿಗೆ ಇದೆ. ರಾಜ್ ಕುಂದ್ರಾ ಸಹ ತಾವು ನಿರ್ಮಾಣ ಮಾಡುತ್ತಿದ್ದ ವಿಡಿಯೋಗಳನ್ನು ಹಾಟ್‌ಶಾಟ್ಸ್‌ ಆಪ್‌ನಲ್ಲಿ ಪ್ರಕಟಿಸುತ್ತಿದ್ದರು. ಹಾಟ್‌ಶಾಟ್ಸ್‌ನಲ್ಲಿ ವಿಡಿಯೋಗಳನ್ನು ನೋಡಲು ಹಣ ತೆತ್ತು ಚಂದಾದಾರಾಗಬೇಕಿತ್ತು. ಆದರೆ ರಾಜ್ ಕುಂದ್ರಾ ಪೋರ್ನ್ ವಿಡಿಯೋ ನಿರ್ಮಾಣ ಮಾಡಿದ್ದರೆ? ಅಥವಾ ಶೃಂಗಾರದ (ಸಾಫ್ಟ್ ಪೋರ್ನ್) ವಿಡಿಯೋಗಳನ್ನು ನಿರ್ಮಾಣ ಮಾಡಿದ್ದರೆ? ಎಂಬುದು ತನಿಖೆಯಿಂದ ಗೊತ್ತಾಗಬೇಕಾಗಿದೆ.

    ವಿದೇಶದಿಂದ ಅಪ್‌ಲೋಡ್ ಆಗುತ್ತವೆ

    ವಿದೇಶದಿಂದ ಅಪ್‌ಲೋಡ್ ಆಗುತ್ತವೆ

    ಭಾರತದಲ್ಲಿ ನಿರ್ಮಾಣವಾಗುವ ಬಹುತೇಕ ವಿಡಿಯೋಗಳು ವಿದೇಶದಿಂದ ಅಪ್‌ಲೋಡ್ ಆಗುತ್ತವೆ. ಅಥವಾ ವಿದೇಶಿ ಪೋರ್ನ್ ವೆಬ್‌ಸೈಟ್‌ಗಳಿಗೆ ಮಾರಾಟವಾಗುತ್ತವೆ. ಭಾರತದಲ್ಲಿ ಪೋರ್ನ್ ಪ್ರದರ್ಶಿಸುವುದು ನಿಷೇಧವಾದ ಕಾರಣ ವಿದೇಶಕ್ಕೆ ಕಳಿಸಿ ಅಲ್ಲಿಂದ ಅಪ್‌ಲೋಡ್ ಮಾಡಿಸಲಾಗುತ್ತದೆ. ಭಾರತದಿಂದಲೇ ಅಪ್‌ಲೋಡ್ ಮಾಡುವವರೂ ಇದ್ದಾರೆ. ಹಲವು ದೇಸಿ ವೆಬ್‌ಸೈಟ್‌ಗಳು ಸಹ ಭಾರತದಲ್ಲಿ ಚಾಲ್ತಿಯಲ್ಲಿವೆ. 'ಸವಿತಾಬಾಬಿ' ಅದರಲ್ಲಿ ಪ್ರಮುಖವಾದುದ್ದು ಮತ್ತು ಹಳೆಯದ್ದು ಸಹ. ಇನ್ನು ಕೆಲವರು ವಿದೇಶಿ ಪೋರ್ನ್ ವೆಬ್‌ಸೈಟ್‌ಗಳೊಟ್ಟಿಗೆ ಒಪ್ಪಂದ ಮಾಡಿಕೊಂಡು ಭಾರತದಲ್ಲಿ ವಿಡಿಯೋ ಚಿತ್ರೀಕರಿಸಿ ಅದನ್ನು ವಿದೇಶಿ ವೆಬ್‌ಸೈಟ್‌ಗಳಿಗೆ ಮಾರಾಟ ಮಾಡಿ ಹಣ ಗಳಿಸುತ್ತಾರೆ. ಇವರಿಗೆಲ್ಲ ದೊಡ್ಡ ಮೊತ್ತದಲ್ಲಿ ಲಾಭ ದೊರೆಯುತ್ತದೆ.

    'ರಾಮ್ ತೇರಿ ಗಂಗಾ ಮೈಲಿ'ಯ ಆ ಹಾಡು

    'ರಾಮ್ ತೇರಿ ಗಂಗಾ ಮೈಲಿ'ಯ ಆ ಹಾಡು

    ಪೋರ್ನ್ ಹಾಗೂ ಸಾಫ್ಟ್‌ ಪೋರ್ನ್ ಅಥವಾ ಎರೊಟಿಕಾ ವಿಡಿಯೋಗಳ ನಡುವೆ ಅಂತರವಿದೆ. ಭಾರತದಲ್ಲಿ ಪೋರ್ನ್ ವಿಡಿಯೋಕ್ಕೆ ನಿರ್ಬಂಧವಿದೆ ಆದರೆ ಸಾಫ್ಟ್ ಪೋರ್ನ್ ಅಥವಾ ಎರೊಟಿಕಾ ವಿಡಿಯೋಗಳಿಗೆ ನಿಷೇಧವಿಲ್ಲ. ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಶೃಂಗಾರದ ದೃಶ್ಯಗಳಿವೆ ಅದೇ ಮಾದರಿಯ ವಿಡಿಯೋಗಳನ್ನು ಹಲವು ಆಪ್‌ಗಳು ನೀಡುತ್ತಿವೆ. ಇಂಥಹಾ ಎರೊಟಿಕಾ ಸಿನಿಮಾ, ವೆಬ್ ಸರಣಿ ನೀಡಲು ಆಲ್ಟ್ ಬಾಲಾಜಿ ಒಟಿಟಿ ಬಹಳ ಜನಪ್ರಿಯ. ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿಯೇ ಈ ರೀತಿ ಉದ್ರೇಕಕಾರಿ ವಿಡಿಯೋಗಳಿವೆ. ಇಲ್ಲಿ ನಟಿಯ ಅಥವಾ ನಟನ ಖಾಸಗಿ ಅಂಗಗಳ ಪ್ರದರ್ಶನವಾಗುವುದಿಲ್ಲ ಬದಲಿಗೆ ನಟ-ನಟಿ ಉದ್ರೇಕಿಸುವ ರೀತಿಯಲ್ಲಿ ವರ್ತಿಸುತ್ತಾರೆ. ಆದರೆ ಕೆಲವು ಸಿನಿಮಾಗಳಲ್ಲಿ ಖಾಸಗಿ ಭಾಗದ ಪ್ರದರ್ಶನವೂ ಆಗಿದ್ದು ಅವು ಬಿಡುಗಡೆ ಸಹ ಆಗಿದೆ. ಉದಾಹರಣೆಗೆ 'ರಾಮ್ ತೇರಿ ಗಂಗಾ ಮೈಲಿ' ಸಿನಿಮಾದ ಹಾಡೊಂದರಲ್ಲಿ ನಟಿ ಮಂದಾಕಿನಿ ತಮ್ಮ ಸ್ತನಗಳ ಪ್ರದರ್ಶನ ಮಾಡುತ್ತಾರೆ. 'ಬ್ಯಾಂಡಿಟ್ ಕ್ವೀನ್' ಸಿನಿಮಾದಲ್ಲಿಯೂ ಖಾಸಗಿ ಅಂಗ ಪ್ರದರ್ಶಿಸುವ ದೃಶ್ಯವಿದೆ. ಇವು ಸಿಬಿಎಫ್‌ಸಿಯಿಂದ ಒಪ್ಪಿಗೆ ಪಡೆದು ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗಿದೆ. ಆದರೆ ಈಗ ಹಾಗೆ ಆಗುವುದು ಸಾಧ್ಯವಿಲ್ಲ. ಅಶ್ಲೀಲ ದೃಶ್ಯಗಳ ಬಗ್ಗೆ ಸಿಬಿಎಫ್‌ಸಿ ಹೆಚ್ಚು ಶಿಸ್ತಿನಿಂದ ವರ್ತಿಸುತ್ತದೆ.

    ಖಾಸಗಿ ವೆಬ್‌ಸೈಟ್‌ಗಳನ್ನು ಹೊಂದಿದ್ದಾರೆ ನಟಿಯರು

    ಖಾಸಗಿ ವೆಬ್‌ಸೈಟ್‌ಗಳನ್ನು ಹೊಂದಿದ್ದಾರೆ ನಟಿಯರು

    ಭಾರತದ ಕೆಲವು ನಟಿಯರು ಸಹ ತಮ್ಮದೇ ಪ್ರತ್ಯೇಕ ವೆಬ್‌ಸೈಟ್‌ಗಳನ್ನು ಹೊಂದಿ ಅದರಲ್ಲಿ ತಮ್ಮ ಪೋರ್ನ್ ವಿಡಿಯೋಗಳನ್ನು ಪ್ರಕಟಿಸುತ್ತಾರೆ. ಸನ್ನಿ ಲಿಯೋನ್‌ಗೆ ಇಂಥಹುದೇ ಪ್ರತ್ಯೇಕ ವೆಬ್‌ಸೈಟ್ ಇದೆ. ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ, ಗೆಹನಾ ಇನ್ನೂ ಕೆಲವು ನಟಿಯರು ತಮ್ಮದೇ ಆದ ವೆಬ್‌ಸೈಟ್ ಹೊಂದಿದ್ದು ಅಲ್ಲಿ ತಮ್ಮ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಾರೆ. ವಿಡಿಯೋಗಳನ್ನು ನೋಡಲು ಇಂತಿಷ್ಟೆಂದು ಶುಲ್ಕ ನಿಗದಿ ಮಾಡಲಾಗಿದ್ದು ವೀಕ್ಷಕರು ಶುಲ್ಕ ಪಾವತಿಸಿ ವಿಡಿಯೋ ನೋಡುತ್ತಾರೆ. ರಾಮ್ ಗೋಪಾಲ್ ವರ್ಮಾ ಸಹ ಹಲವು ಸಾಫ್ಟ್‌ ಪೋರ್ನ್, ಪೋರ್ನ ಸಿನಿಮಾಗಳನ್ನು ನಿರ್ಮಿಸಿದ್ದಾರೆ ಅವುಗಳನ್ನು ಅವರು ತಮ್ಮದೇ ವೆಬ್‌ಸೈಟ್ ತೆರೆದು ಅಲ್ಲಿ ಪ್ರದರ್ಶಿಸುತ್ತಾರೆ.

    English summary
    How big indecent video industry in India, how they make money. After Raj Kundra's arrest everyone talking about this industry.
    Wednesday, August 4, 2021, 18:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X