Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಉಪೇಂದ್ರ' ಚಿತ್ರದ ಕಥೆ ಹುಟ್ಟಿದ ಹಿಂದಿನ ರೋಚಕ ಸಂಗತಿ
ಒಂದು ಸಿನಿಮಾದ ಹುಟ್ಟಿನ ಹಿಂದೆ ಒಂದು ಕಥೆ ಇದ್ದೇ ಇರುತ್ತದೆ. ಕೆಲವು ಬಾರಿ ಅದು ಆ ಸಿನಿಮಾದ ಕಥೆಗಿಂತ ಕುತೂಹಲಕಾರಿಯಾಗಿರುತ್ತದೆ.
ರಿಯಲ್ ಸ್ಟಾರ್ ಉಪೇಂದ್ರ ಕೆರಿಯರ್ ನಲ್ಲಿ ದೊಡ್ಡ ಯಶಸ್ಸು ನೀಡಿದ್ದ ಸಿನಿಮಾ 'ಉಪೇಂದ್ರ'. ತಮ್ಮದೆ ಹೆಸರಿನಲ್ಲಿ ಸಿನಿಮಾ ಮಾಡಿದ್ದ ಉಪ್ಪಿ, ಈ ಸಿನಿಮಾದ ಮೂಲಕ ಅವರ ಹೆಸರನ್ನು ಇನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋದರು.
'ಉಪೇಂದ್ರ' ಒಂದು ಪಕ್ಕಾ ಕಲ್ಟ್ ಸಿನಿಮಾ. ಆ ಸಿನಿಮಾದ ಕೆಲವು ವಿಷಯಗಳು ಈ ಜನರೇಶನ್ ಗೂ ಆಶ್ಚರ್ಯ ಉಂಟು ಮಾಡತ್ತದೆ. ಹೀಗಿರುವಾಗ, ಆ ಕಾಲದಲ್ಲಿಯೇ ಅಂತಹ ಸಿನಿಮಾ ರಿಯಲ್ ಸ್ಟಾರ್ ಹೇಗೆ ಮಾಡಿದ್ರು ಎನ್ನುವ ಕುತೂಹಲ ಅನೇಕರಿಗೆ ಇರುತ್ತದೆ.
ಅ,
ಬ,
ಪ,
ಮ....
ಈ
ಅಕ್ಷರಗಳಲ್ಲಿದೆ
ಸ್ಟಾರ್
ನಿರ್ದೇಶಕರ
ಶಕ್ತಿ
ಅಂದಹಾಗೆ, 'ಉಪೇಂದ್ರ' ಸಿನಿಮಾದ ಕಥೆ ಹುಟ್ಟಿದ ಘಟನೆ ತುಂಬ ಚೆನ್ನಾಗಿದೆ. ವಾದ ವಿವಾದದಲ್ಲಿ ಶುರುವಾದ ಒಂದು ವಿಷಯ, ಕಥೆಯಾಗಿ, ಮುಂದೆ ಸಿನಿಮಾವಾಗಿ ದೊಡ್ಡ ಸೂಪರ್ ಹಿಟ್ ಆಯ್ತು.

ಗೆಳೆಯರ ಜೊತೆ ಮದುವೆ ಮುಗಿಸಿಕೊಂಡು ಬರುತ್ತಿದ್ದ ಉಪ್ಪಿ
ಉಪೇಂದ್ರ ತಮ್ಮ ಗೆಳೆಯರ ಜೊತೆಗೆ ಒಂದು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರಂತೆ. ಕಾರ್ ನಲ್ಲಿ ಬೆಂಗಳೂರಿಗೆ ವಾಪಸ್ ಬರುವಾಗ, ಓಶೋ ಅವರ ಆಡಿಯೋ ಕಾರ್ ನಲ್ಲಿ ಪ್ಲೇ ಆಗುತ್ತಿತ್ತು. ಪ್ರೀತಿ, ಪ್ರೇಮ, ಮದುವೆ, ಸಂಬಂಧ ಈ ವಿಷಯಗಳ ಬಗ್ಗೆ ಓಶೋ ಮಾತನಾಡುತ್ತಿದ್ದರು. ಅದೇ 'ಉಪೇಂದ್ರ' ಕಥೆಯ ಹುಟ್ಟಿಗೆ ಮೊದಲ ಕಾರಣವಾಯ್ತು.

ಪ್ರೀತಿ ಬಗ್ಗೆ ಗೆಳೆಯರ ನಡುವೆ ಚರ್ಚೆ
ಆಡಿಯೋ ಕೇಳುತ್ತಿದ್ದ ಉಪೇಂದ್ರ ಪ್ರೀತಿ ಬಗ್ಗೆ ನಿಮಗೆ ಏನನಿಸುತ್ತದೆ ಎಂದು ಸ್ನೇಹಿತರಿಗೆ ಪ್ರಶ್ನೆ ಮಾಡಿದರು. ಎಲ್ಲರೂ ತಮ್ಮ ಅನುಭವ ಹಾಗೂ ಅಭಿಪ್ರಾಯಗಳನ್ನು ಹೊರ ಹಾಕಿದರು. ವಾದ, ವಿವಾದ, ಚರ್ಚೆ ಜೋರಾಗಿ ನಡೆಯಿತು. ಅದರ ವಿಷಯಗಳು ತುಂಬ ಇಂಟ್ರೆಸ್ಟಿಂಗ್ ಆಗುತ್ತಾ ಹೋಯ್ತು. ಇದೆಲ್ಲವನ್ನು ಉಪೇಂದ್ರ ಸೂಕ್ಷ್ಮವಾಗಿ ಗಮನಿಸುತ್ತಿದ್ದರು.

ಮೂರು ನಾಯಕಿಯರು
ಸ್ನೇಹಿತರ ಮಾತುಗಳನ್ನು ಇಟ್ಟುಕೊಂಡು, ಅವರು ಹೇಳಿದ ಕೆಲವು ಸನ್ನಿವೇಶಗಳ ಮೇಲೆ 'ಉಪೇಂದ್ರ' ಕಥೆ ಪ್ರಾರಂಭ ಆಯ್ತು. ಗೆಳೆಯರ ಚರ್ಚೆಯೇ ಕಥೆಗೆ ಅಂಶಗಳನ್ನು ನೀಡುತ್ತಾ ಹೋಯ್ತು. ನಂತರ ಬೇಸಿಗೆಗಾಲ, ಚಳಿಗಾಲ, ಮಳೆಗಾಲ ಹೀಗೆ ಮೂರು ಕಾಲಗಳನ್ನು ಪ್ರತಿನಿಧಿಸುವ ಹಾಗೆ ಮೂರು ನಾಯಕಿಯರ ಪಾತ್ರಗಳು ಸೃಷ್ಟಿಯಾಯ್ತು.

'ನಾನು' ಬದಲು 'ಉಪೇಂದ್ರ' ಬಂದ
ನಾನು ಎಂಬ ಒಂದು ಪಾತ್ರ ಹೇಗೆ ಯೋಚನೆ ಮಾಡುತ್ತದೆ ಎನ್ನುವ ಅಂಶ ಕಥೆಗೆ ಹೊಸ ರೂಪ ತಂದು ಕೊಟ್ಟಿತು. ಮೊದಲು ಸಿನಿಮಾ 'ನಾನು' ಎಂದೇ ಟೈಟಲ್ ಇಡಬೇಕು ಎಂಬ ಯೋಚನೆ ಉಪ್ಪಿಗೆ ಇತ್ತು. ಆದರೆ, ಆ ಬಳಿಕ 'ನಾನು ಎಂದರೆ ಯಾರು..?'.. ಉಪೇಂದ್ರ. ಹೀಗಾಗಿ ತಮ್ಮ ಹೆಸರನ್ನೇ ಸಿನಿಮಾದ ಟೈಟಲ್ ಮಾಡಿದರು. ಹೀಗೆ ಈ ಸಿನಿಮಾದ ಕಥೆ ಪ್ರಾರಂಭವಾಯಿತು.
Recommended Video

ನಿರ್ಮಾಪಕರಿಗೆ ಅರ್ಥವೇ ಆಗಲಿಲ್ಲ
ಉಪೇಂದ್ರ ಸಿನಿಮಾವನ್ನು ಎಚ್ ಸಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು. ಸಿನಿಮಾದ ಚಿತ್ರೀಕರಣದ ವೇಳೆ ಅವರಿಗೆ ಸಿನಿಮಾ ಅರ್ಥವೇ ಆಗಿರಲಿಲ್ಲವಂತೆ. ಉಪೇಂದ್ರ ಏನು ಮಾಡುತ್ತಿದ್ದಾನೆ ಎಂದು ತಲೆ ಕಡಿಸಿಕೊಂಡಿದ್ದರಂತೆ. ಆದರೆ, ಸಿನಿಮಾ ಮುಗಿದು, ಬಿಡುಗಡೆಯಾಗಿ, ದೊಡ್ಡ ಹಿಟ್ ಆಗಿದ್ದು, ಅವರಿಗೆ ತುಂಬ ಖುಷಿ ನೀಡಿತ್ತಂತೆ.