For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಚೋಪ್ರಾ ರಿಜೆಕ್ಟ್ ಮಾಡಿದ್ದ ಈ ಸಿನಿಮಾಗಳು ಸೂಪರ್ ಹಿಟ್ ಆಗಿವೆ

  |

  ಬಾಲಿವುಡ್‌ನ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಪತಿ ನಿಕ್ ಜೋನಸ್ ಜೊತೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಅಪರೂಪಕ್ಕೆ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಕೊನೆಯದಾಗಿ ವೈಟ್ ಟೈಗರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

  ಸದ್ಯ ಪ್ರಿಯಾಂಕಾ ಯಾವುದೇ ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ, ಆದರೆ ಬೇಡಿಕೆ ಇನ್ನು ಕಮ್ಮಿ ಆಗಿಲ್ಲ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಪ್ರಿಯಾಂಕಾ ಸಾಕಷ್ಟು ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರೆ. ಪ್ರಿಯಾಂಕಾ ತಿರಸ್ಕರಿಸಿದ ಸಿನಿಮಾಗಳು ಬಾಲಿವುಡ್‌ನಲ್ಲಿ ಸೂಪರ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಮಾಯಿ ಮಾಡಿವೆ. ಇತ್ತೀಚಿಗೆ ಸಲ್ಮಾನ್ ಸಿನಿಮಾ ತಿರಸ್ಕರಿಸಿದ ಬಗ್ಗೆ ಕೇಳಿರುತ್ತೀರಿ. ಆದರೆ ಕೇವಲ ಸಲ್ಮಾನ್ ಖಾನ್ ಸಿನಿಮಾ ಮಾತ್ರವಲ್ಲ, ಅನೇಕ ಹಿಟ್ ಸಿನಿಮಾಗಳನ್ನು ಕೈ ಚೆಲ್ಲಿದ್ದಾರೆ.

  Rap ಲೆಜೆಂಡ್ DMX ನಿಧನ; ಪ್ರಿಯಾಂಕಾ, ರಣ್ವೀರ್ ಸೇರಿದಂತೆ ಅನೇಕ ಗಣ್ಯರ ಸಂತಾಪ

  ಆಮೀರ್ ಖಾನ್ 'ಗಜಿನಿ'

  ಆಮೀರ್ ಖಾನ್ 'ಗಜಿನಿ'

  ಆಮೀರ್ ಖಾನ್ ನಟನೆಯ ಗಜಿನಿ ಸಿನಿಮಾಗೆ ನಾಯಕಿಯಾಗುವ ಅವಕಾಶ ಒದಗಿಬಂದಿತ್ತು. ಆದರೆ ಪ್ರಿಯಾಂಕಾ ಕೆಲವು ಕಾರಣಗಳಿಂದ ಈ ಸಿನಿಮಾವನ್ನು ರಿಜೆಕ್ಟ್ ಮಾಡುತ್ತಾರೆ. ಪ್ರಿಯಾಂಕಾ ತಿರಸ್ಕರಿಸಿದ ಬಳಿಕ ಆಮೀರ್ ಜೊತೆ ನಟಿ ಆಸಿನ್ ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾ ಕೂಡ ಬಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದೆ.

  ರಜನಿಕಾಂತ್ 'ರೋಬೋಟ್'

  ರಜನಿಕಾಂತ್ 'ರೋಬೋಟ್'

  ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಸೂಪರ್ ಹಿಟ್ ರೋಬೋಟ್ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸಬೇಕಿತ್ತಂತೆ. ಚಿತ್ರತಂಡ ಮೊದಲು ಪ್ರಿಯಾಂಕಾ ಚೋಪ್ರಾ ಅವರನ್ನು ಸಂಪರ್ಕ ಮಾಡಿತ್ತು. ಆದರೆ ಕಾರಣಾಂತರಗಳಿಂದ ಪ್ರಿಯಾಂಕಾ ಈ ಸಿನಿಮಾಗೆ ಸಹಿ ಮಾಡುವುದಿಲ್ಲ. ಬಳಿಕ ಪ್ರಿಯಾಂಕಾ ಪಾತ್ರದಲ್ಲಿ ನಟಿ ಐಶ್ವರ್ಯ ರೈ ಕಾಣಿಸಿಕೊಳ್ಳುತ್ತಾರೆ.

  ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಚಿತ್ರ ಯಾವಾಗ?

  '2 ಸ್ಟೇಟ್ಸ್' ಸಿನಿಮಾ

  '2 ಸ್ಟೇಟ್ಸ್' ಸಿನಿಮಾ

  2014ರಲ್ಲಿ ಬಂದ 2 ಸ್ಟೇಟ್ಸ್ ಸಿನಿಮಾಗೆ ಮೊದಲ ಆಯ್ಕೆಯಾಗಿದ್ದು ನಟಿ ಪ್ರಿಯಾಂಕಾ ಚೋಪ್ರಾ. ನಾಯಕನ ಪಾತ್ರಕ್ಕೆ ಮೊದಲು ಶಾರುಖ್ ಖಾನ್ ಆಯ್ಕೆಯಾಗಿದ್ದರು. ಆದರೆ ಶಾರುಖ್ ಮತ್ತು ಪ್ರಿಯಾಂಕಾ ಇಬ್ಬರೂ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಕೊನೆಯದಾಗಿ ನಟಿ ಆಲಿಯಾ ಭಟ್ ಮತ್ತು ಅರ್ಜುನ್ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

  ಸಲ್ಮಾನ್ ಖಾನ್ 'ಕಿಕ್'

  ಸಲ್ಮಾನ್ ಖಾನ್ 'ಕಿಕ್'

  ಬಾಲಿವುಡ್ ಬ್ಯಾಡ್ ಅಂತಾನೇ ಕರೆಸಿಕೊಳ್ಳುವ ಸಲ್ಮಾನ್ ಖಾನ್ ನಟನೆಯ ಕಿಕ್ ಸಿನಿಮಾಗೆ ಮೊದಲು ಪ್ರಿಯಾಂಕಾ ಚೋಪ್ರಾ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಪ್ರಿಯಾಂಕಾ ಸಲ್ಮಾನ್ ಖಾನ್ ಜೊತೆ ನಟಿಸಲು ನಿರಾಕರಿಸುತ್ತಾರೆ. ಬಳಿಕ ಪ್ರಿಯಾಂಕಾ ಮಾಡಬೇಕಿದ್ದ ಪಾತ್ರ ಜಾಕ್ವೆಲಿನ್ ಫರ್ನಾಂಡಿಸ್ ಪಾಲಾಯಿತು.

  ಸುಲ್ತಾನ್ ಸಿನಿಮಾ

  ಸುಲ್ತಾನ್ ಸಿನಿಮಾ

  ಸಲ್ಮಾನ್ ಖಾನ್ ನಟನೆಯ ಸುಲ್ತಾನ್ ಸಿನಿಮಾಗೂ ಮೊದಲು ಆಯ್ಕೆಯಾಗಿದ್ದು, ಪ್ರಿಯಾಂಕಾ ಚೋಪ್ರಾ. ಆದರೆ ಪ್ರಿಯಾಂಕಾ ತನ್ನ ಸಹೋದರಿ ಪರಿಣೀತಿ ಚೋಪ್ರಾ ಈ ಪಾತ್ರ ಮಾಡಲಿ ಎಂದು ಸುಲ್ತಾನ್ ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ಪರಿಣೀತಿ ಕೂಡ ಕಾಣಿಸಿಕೊಳ್ಳುವುದಿಲ್ಲ. ಸುಲ್ತಾನ್ ಚಿತ್ರದಲ್ಲಿ ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ಅನುಷ್ಕಾ ಶರ್ಮಾ ನಾಯಕಿಯಾಗಿ ಮಿಂಚುತ್ತಾರೆ.

  'ಫನ್ನೆ ಖಾನ್'

  'ಫನ್ನೆ ಖಾನ್'

  ಫನ್ನೆ ಖಾನ್ ಸಿನಿಮಾಗೂ ಮೊದಲು ಪ್ರಿಯಾಂಕಾ ಚೋಪ್ರಾ ಆಯ್ಕೆಯಾಗಿದ್ದರು. ಆದರೆ ಡೇಟ್ ಹೊಂದಾಣಿಕೆಯಿಂದ ಸಿನಿಮಾವನ್ನು ಒಪ್ಪಿಕೊಳ್ಳಲು ಪ್ರಿಯಾಂಕಾ ಹಿಂದೇಟು ಹಾಕುತ್ತಾರೆ. ಈ ಬಗ್ಗೆ ಫನ್ನೆ ಖಾನ್ ನಿರ್ದೇಶಕ ಬಹಿರಂಗ ಪಡಿಸಿದ್ದಾರೆ. ಬಳಿಕ ಪ್ರಿಯಾಂಕಾ ಪಾತ್ರದಲ್ಲಿ ನಟಿ ಐಶ್ವರ್ಯ ರೈ ನಾಯಕಿಯಾಗಿ ಆಯ್ಕೆಯಾಗುತ್ತಾರೆ.

  ಸಲ್ಮಾನ್ ಖಾನ್ 'ಭಾರತ್'

  ಸಲ್ಮಾನ್ ಖಾನ್ 'ಭಾರತ್'

  ಸುಲ್ತಾನ್ ಬಳಿಕ ಮತ್ತೆ ಸಲ್ಮಾನ್ ಖಾನ್ ಜೊತೆ ನಟಿಸುವ ಅವಕಾಶ ಪ್ರಿಯಾಂಕಾ ಚೋಪ್ರಾಗೆ ಒಲಿದು ಬಂದಿತ್ತು. ಆದರೆ ಆಗಲೂ ಪ್ರಿಯಾಂಕಾ ನಿರಾಕರಿಸುತ್ತಾರೆ. ಆಗಲೇ ಪ್ರಿಯಾಂಕಾ ಬಾಲಿವುಡ್ ನಿಂದ ಹಾಲಿವುಡ್ ಹಾರಿದ್ದರು. ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಭಾರತ್ ಸಿನಿಮಾ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ನಿಕ್ ಜೋನಸ್ ಜೊತೆ ಮದುವೆಯಾಗುವ ಪ್ಲಾನ್ ಮಾಡಿದ್ದ ಪ್ರಿಯಾಂಕಾ ಭಾರತ್ ಸಿನಿಮಾವನ್ನು ನಿರಾಕರಿಸುತ್ತಾರೆ. ಬಳಿಕ ಪ್ರಿಯಾಂಕಾ ಪಾತ್ರದಲ್ಲಿ ಕತ್ರಿನಾ ಕೈಫ್ ಕಾಣಿಸಿಕೊಳ್ಳುತ್ತಾರೆ.

  ಇಷ್ಟೆಯಲ್ಲ ಇನ್ನು ಅನೇಕ ಸಿನಿಮಾಗಳನ್ನು ತಿರಸ್ಕರಿಸಿದ್ದಾರೆ. ಸದ್ಯ ಯಾವುದೇ ಬಾಲಿವುಡ್ ಸಿನಿಮಾಗಳಿಗೂ ಗ್ರೀನ್ ಸಿಗ್ನಲ್ ನೀಡಿಲ್ಲ. ಮುಂದಿನ ವರ್ಷ ಹಿಂದಿ ಸಿನಿಮಾ ಮಾಡುವುದಾಗಿ ಪ್ರಿಯಾಂಕಾ ಹೇಳಿದ್ದಾರೆ.

  English summary
  Bollywood Actress Priyanka Chopra rejected these super hit movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X