For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯರನ್ನು ಪ್ರೀತಿಸುವ ಅವಕಾಶವೇ ಸಿಕ್ಕಿಲ್ಲ, ನಾನು ತುಂಬಾ ದುರದೃಷ್ಟವಂತ: ನಟ ಶಾರುಖ್ ಖಾನ್

  |

  ಬಾಲಿವುಡ್ ಕಿಂಗ್ ಖಾನ್ ಶಾರುಖ್ ಮತ್ತು ನಟಿ ಐಶ್ವರ್ಯ ರೈ ಬಚ್ಚನ್ ಇಬ್ಬರು ಸೂಪರ್ ಸ್ಟಾರ್ಸ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಬ್ಬರಿಗೂ ಸಹ ಅವರದ್ದೇ ಆದ ಅಭಿಮಾನಿ ಬಳಗವಿದೆ. ದಶಕಗಳ ಕಾಲ ಬಾಲಿವುಡ್ ಆಳಿದ ಈ ಸ್ಟಾರ್ಸ್ಸ್ ಒಟ್ಟಿಗೆ ಕಲವೇ ಕಲೆವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

  ಮೊಮ್ಮಗಳ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗಿಯಾದ ಬಿಗ್ ಬಿ | AMITABH BACHAN | ABHISHEK | AISHWARYA | ARADHYA

  ಜೋಶ್, ಮೊಹಬ್ಬಾತಿನ್ ಮತ್ತು ಎವರ್ ಗ್ರೀನ್ ದೇವದಾಸ್ ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟರು ತಾವು ಅಭಿನಯದ ನಾಯಕಿ ಅಥವಾ ನಾಯಕನ ಜೊತೆ ಲಿಂಕ್ ಅಪ್, ಪ್ರೀತಿ, ಪ್ರೇಮ ಎನ್ನುವ ಗುಸುಗುಸು ಕೇಳಿ ಬರುತ್ತಿರುತ್ತೆ. ಆದರೆ ಶಾರುಖ್ ಮತ್ತು ಐಶ್ ವಿಚಾರದಲ್ಲಿ ಇದೆಲ್ಲ ದೂರದ ಮಾತು.

  ಈ ಜೋಡಿ ತೆರೆ ಮೇಲೂ ಸಹ ರೋಮ್ಯಾನ್ಸ್ ಮಾಡಿಲ್ಲ. ಇದೆ ಬೇಜಾರಿನ ಸಂಗತಿಯನ್ನು ನಟ ಶಾರುಖ್ ಖಾನ್ ಒಮ್ಮೆ ಬಹಿರಂಗ ಪಡಿಸಿದ್ದರು. ಅವಾರ್ಡ್ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಶಾರುಖ್ "ನಾನು ತುಂಬಾ ದುರದೃಷ್ಟವಂತ" ಎಂದು ಹೇಳಿದ್ದರು. ಮುಂದೆ ಓದಿ..

  ಶಾರುಖ್-ಐಶ್ ಹ್ಯಾಪಿ ರೊಮ್ಯಾಂಟಿಕ್ ಕಪಲ್ ಅಲ್ಲ

  ಶಾರುಖ್-ಐಶ್ ಹ್ಯಾಪಿ ರೊಮ್ಯಾಂಟಿಕ್ ಕಪಲ್ ಅಲ್ಲ

  ಚಿತ್ರರಂಗದಲ್ಲಿ ತೆರೆಮೇಲಿನ ಕೆಮಿಸ್ಟ್ರಿ ನೋಡಿ ಹಿಟ್ ಜೋಡಿಗಳೆಂದು ಕರೆಯುತ್ತಾರೆ. ಆದರೆ ಶಾರುಖ್ ಮತ್ತು ಐಶ್ ವಿಚಾರದಲ್ಲಿ ಇದು ಸಾಧ್ಯವಾಗಿಲ್ಲ. ಇಬ್ಬರು ತೆರೆ ಹಿಂದೆ ಅಥವಾ ತೆರೆ ಮೇಲೆ ಬಾಲಿವುಡ್ ನ ಫೇಮಸ್ ರೊಮ್ಯಾಂಟಿಕ್ ಕಪಲ್ ಆಗಲು ಸಾಧ್ಯವಾಗಲೇ ಇಲ್ಲ. ಬಾಲಿವುಡ್ ನ ಹಿಟ್ ಜೋಡಿ ಅಂತನೂ ಅನಿಸಿಕೊಂಡಿಲ್ಲ.

  ಜಗತ್ತಿನ ಸುಂದರ ಸ್ತ್ರೀಗೆ ಸಹೋದರ ಆಗಿದ್ದು ದುರದೃಷ್ಟ

  ಜಗತ್ತಿನ ಸುಂದರ ಸ್ತ್ರೀಗೆ ಸಹೋದರ ಆಗಿದ್ದು ದುರದೃಷ್ಟ

  ಶಾರುಖ್ ಖಾನ್ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಐಶ್ವರ್ಯ ರೈ ಜೊತೆ ರೋಮ್ಯಾನ್ಸ್ ಮಾಡಲು ಸಾಧ್ಯವಾಗಿಲ್ಲ ಎಂದಿದ್ದಾರೆ. "ಐಶ್ವರ್ಯ ಅವರೊಂದಿಗೆ ನಾನು ತುಂಬಾ ದುರದೃಷ್ಟಶಾಲಿಯಾಗಿದ್ದೇನೆ. ಮೊದಲ ಸಿನಿಮಾದಲ್ಲೇ ಜಗತ್ತಿನ ಸುಂದರ ಸ್ತ್ರೀಗೆ ಸಹೋದರನಾಗಿ ಕಾಣಿಸಿಕೊಂಡೆ. ವಿಶ್ವದ ಅತೀ ಸುಂದರಿ ನನ್ನ ಸಹೋದರಿಯಾಗಿ ಕಾಣಿಸಿಕೊಂಡಿದ್ದಾರೆ. ನಾನು ನೋಡೋಕೆ ಅವರ ಹಾಗೆ ಕಾಣುತ್ತೇನಂತೆ. ಪಾತ್ರ ಮಾಡಿದ ನಂತರ ನಾನು ಅವಳಂತೆ ಕಾಣುತ್ತೇನೆ ಎಂಬ ತಪ್ಪು ಗ್ರಹಿಕೆಯಲ್ಲಿ ಇನ್ನೂ ಜೀವಿಸುತ್ತಿದ್ದೇನೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಜೋಶ್ ಚಿತ್ರದಲ್ಲಿ ಶಾರುಖ್ ಸಹೋದರಿಯಾಗಿದ್ದ ಐಶ್

  ಜೋಶ್ ಚಿತ್ರದಲ್ಲಿ ಶಾರುಖ್ ಸಹೋದರಿಯಾಗಿದ್ದ ಐಶ್

  ಶಾರುಖ್ ಖಾನ್ ಅಭಿನಯದ ಜೋಶ್ ಚಿತ್ರದಲ್ಲಿ ಐಶ್ವರ್ಯ ರೈ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2000ರಲ್ಲಿ ರಿಲೀಸ್ ಆದ ಜೋಶ್ ಸಿನಿಮಾದಲ್ಲಿ ಶಾರುಖ್ ಮತ್ತು ಐಶ್ ಅವಳಿ ಮಕ್ಕಳಾಗಿ ಕಾಣಿಸಿಕೊಂಡಿದ್ದರು. ಮನ್ಸೂರ್ ಖಾನ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದ್ದಿತ್ತು.

  ಐಶ್ವರ್ಯರನ್ನು ಪ್ರೀತಿಸುವ ಅವಕಾಶ ಸಿಗಲೇ ಇಲ್ಲ

  ಐಶ್ವರ್ಯರನ್ನು ಪ್ರೀತಿಸುವ ಅವಕಾಶ ಸಿಗಲೇ ಇಲ್ಲ

  ಐಶ್ವರ್ಯ ಜೊತೆ ದೇವದಾಸ್ ಸಿನಿಮಾದಲ್ಲಿ ಶಾರುಖ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿಯೂ ಶಾರುಖ್ ಮತ್ತು ಐಶ್ವರ್ಯ ಪ್ರೀತಿ ಗೆಲ್ಲಲೇ ಇಲ್ಲ. ನಂತರ ಇಬ್ಬರು ಮೊಹಬ್ಬಾತಿನ್ ಸಿನಿಮಾದಲ್ಲಿ ಕಾಣಿಸಿಕಂಡಿದ್ದಾರೆ. ತೆರೆ ಮೇಲೆ ಇಬ್ಬರು ಹ್ಯಾಪಿ ರೋಮ್ಯಾಂಟಿಕ್ ಕಪಲ್ ಆಗಲು ಸಾಧ್ಯವೆ ಆಗಿಲ್ಲ" ಎಂದು ಶಾರುಖ್ ಹೇಳಿದ್ದಾರೆ.

  ಐಶ್ವರ್ಯ ಜೊತೆ ರೊಮ್ಯಾಂಟಿಕ್ ಸಿನಿಮಾ ಮಾಡುತ್ತೇನೆ

  ಐಶ್ವರ್ಯ ಜೊತೆ ರೊಮ್ಯಾಂಟಿಕ್ ಸಿನಿಮಾ ಮಾಡುತ್ತೇನೆ

  ಈ ಹಿಂದೆ ಮಾತನಾಡುವಾಗ ಶಾರುಖ್, ಐಶ್ವರ್ಯ ಜೊತೆ ರೊಮ್ಯಾಂಟಿಕ್ ಸಿನಿಮಾ ಮಾಡಲು ಕಾಯುತ್ತಿದ್ದೇನೆ. ಖಂಡಿತ ಆ ಸಿನಿಮಾದಲ್ಲಿ ಸಂತೋಷದ ಅಂತ್ಯ ಇರುತ್ತೆ. ಎಂದು ಶಾರುಖ್ ಖಾನ್ ಹೇಳಿದ್ದಾರೆ. ಆದರೆ ಇದುವರೆಗೂ ಐಶ್ ಮತ್ತು ಶಾರುಖ್ ರೊಮ್ಯಾಂಟಿಕ್ ಸಿನಿಮಾದಲ್ಲಿ ಕಾಣಿಸಿಕಂಡಿಲ್ಲ. ಐಶ್ವರ್ಯ ರೈ ಕೊನೆಯದಾಗಿ ಎ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Bollywood Actor Shah Rukh Khan said I have been unlucky with Aishwarya Rai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X